ಭಟ್ಕಳ: ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ ಪ್ರಕರಣ; 7 ಮಂದಿಯ ಸೆರೆ
Update: 2017-09-17 19:48 IST
ಭಟ್ಕಳ, ಸೆ. 17: ಪುರಸಭೆವತಿಯಿಂದ ಅಂಗಡಿ ತೆರವು ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ರಾಮಚಂದ್ರ ನಾಯ್ಕ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ನಡೆದ ಸಾರ್ವಜನಿಕರ ಪ್ರತಿಭಟನೆ, ಪುರಸಭೆ ಕಚೇರಿ ಮೇಲೆ ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿವಾರ 7 ಮಂದಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಈಶ್ವರ ನಾಯ್ಕ, ಮಾಸ್ತಪ್ಪ ನಾಯ್ಕ, ಶೇಖರ್ ನಾಯ್ಕ, ಜನಾರ್ಧನ ನಾಯ್ಕ, ಶಂಕರ್ ನಾಯ್ಕ, ರಾಜೇಶ್ ನಾಯ್ಕ ಹಾಗೂ ದಯಾನಂದ ದೇವಾಡಿಗ ಎಂದು ಗುರುತಿಸಲಾಗಿದೆ.
ಇವರನ್ನು ನ್ಯಾಯಾದೀಶರ ಮನೆಗೆ ಹಾಜರು ಪಡಿಸಿದ್ದು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.