ಎಸ್‌ಡಿಪಿಐಯಿಂದ ರಕ್ತದಾನ ಶಿಬಿರ
Update: 2017-09-17 22:01 IST
ಮಂಗಳೂರು, ಸೆ.17: ಎಸ್‌ಡಿಪಿಐ ಕಾವೂರು ವಲಯ ಸಮಿತಿ ಹಾಗೂ ಎ.ಜೆ. ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಎಸ್‌ಡಿಪಿಐ ಕಾವೂರು ವಲಯ ಸಮಿತಿಯ ಉಪಾಧ್ಯಕ್ಷ ನಿಸಾರ್ ಕೂಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಜೆ. ಆಸ್ಪತ್ರೆಯ ರಕ್ತ ಸಂಗ್ರಹ ವಿಭಾಗದ ಗೋಪಾಲ ಕೃಷ್ಣ ಇವರು ರಕ್ತದ ಹಾಗೂ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.
ಕೆಎಂಜೆಎಂ ಜುಮಾ ಮಸೀದಿಯ ಅಧ್ಯಕ್ಷ ಶರೀಫ್ ಕೂಳೂರು ಅವರು ಎಸ್‌ಡಿಪಿಐ ಯವರ ಸಮಾಜ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯರಾಗಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಉಮರುಲ್ ಫಾರೂಕ್, ಶಾಂತಿನಗರ ಅಲ್ ಫಾರೂಕ್ ಜುಮಾ ಮಸೀದಿಯ ಅಧ್ಯಕ್ಷ ಕೆ.ಖಾದರ್, ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಹನೀಫ್ ಕಾವೂರು, ಎಸ್‌ಡಿಪಿಐ ಕಾವೂರು ವಲಯಾಧ್ಯಕ್ಷ ರಫೀಕ್ ಕೂಳೂರು ಮತ್ತು ಪಿಎಫ್‌ಐ ಕಾವೂರು ಏರಿಯಾದ ಅಧ್ಯಕ್ಷ ನೌಶಾದ್ ಕಾವೂರು ಉಸ್ಥಿತರಿದ್ದರು.