ಬಿ.ಸಿ.ರೋಡ್: ವಿಶ್ವಕರ್ಮ ದಿನಾಚರಣೆ
Update: 2017-09-17 22:15 IST
ಬಂಟ್ವಾಳ, ಸೆ. 17: ಬಿ.ಸಿ.ರೋಡ್ ತಾಲೂಕು ಕಚೇರಿಯಲ್ಲಿ ರವಿವಾರ ಏರ್ಪಡಿಸಿದ್ದ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮವನ್ನು ತಹಶೀಲ್ದಾರ್ ಪುರಂದರ ಹೆಗ್ಡೆ ಉದ್ಘಾಟಿಸಿದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವಿಭಜಿತ ಜಿಲ್ಲಾ ವಿಶ್ವಕರ್ಮ ಒಕ್ಕೂಟ ಸದಸ್ಯ ಬಿ.ಜಿ.ರಮೇಶ್ ಆಚಾರ್ಯ, ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ, ಕೋಶಾಧಿಕಾರಿ ಜಯಚಂದ್ರ ಆಚಾರ್ಯ ಸರಪಾಡಿ, ಉಪ ತಹಶೀಲ್ದಾರ್ ಸೀತಾರಾಮ, ಕಂದಾಯ ನಿರೀಕ್ಷಕ ನವೀನ್, ಆಹಾರ ನಿರೀಕ್ಷಕ ಶ್ರೀನಿವಾಸ್, ಪ್ರಮುಖರಾದ ವಿಶು ಕುಮಾರ್, ಮೌನೇಶ್ ವಿಶ್ವಕರ್ಮ ಮತ್ತಿತರರು ಇದ್ದರು. ಇದೇ ವೇಳೆ ಕಾಷ್ಠಶಿಲ್ಪಿ ರಾಜೇಶ್ ಆಚಾರ್ಯ ವಾಮದಪದವು ಇವರನ್ನು ಸನ್ಮಾನಿಸಲಾಯಿತು.
ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ ಸ್ವಾಗತಿಸಿ, ಉಪ ತಹಶೀಲ್ದಾರ್ ಗೋಪಾಲ ವಂದಿಸಿದರು.