ಭಾರೀ ಮಳೆ: ನೀರಿನ ಕಮರಿಗೆ ಬಿದ್ದು ಬಾಲಕಿ ಸಾವು
Update: 2017-09-17 22:16 IST
ತಿರುವನಂತಪುರಂ, ಸೆ. 17: ಕೇರಳದಾದ್ಯಂತ ಶನಿವಾರದಿಂದ ಭಾರೀ ಮಳೆ ಸುರಿಯುತ್ತಿದ್ದು, ಓರ್ವ ಬಾಲಕಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾಳೆ.
ಪಾಲಕ್ಕಾಡ್‌ನಲ್ಲಿ 8 ವರ್ಷದ ಬಾಲಕಿ ಮನೆಯ ಸಮೀಪ ಹರಿಯುತ್ತಿದ್ದ ನೀರಿನ ಕಮರಿಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಐದು ಅಣೆಕಟ್ಟುಗಳನ್ನು ಗೇಟುಗಳ ತೆರೆಯಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ವಿಕೋಪ ನಿರ್ವಹಣೆ, ಅಗ್ನಿ ಶಾಮಕ ದಳ ಹಾಗೂ ರಕ್ಷಣಾ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ದೇಶಿಸಿದ್ದಾರೆ.