ಪಾಣೆಮಂಗಳೂರು: ಭವ್ಯ ಮಂಗಲ ಪ್ರವಚನ ಕಾರ್ಯಕ್ರಮ
ಬಂಟ್ವಾಳ, ಸೆ. 17 ತಾಲೂಕಿನ ಪಾಣೆಮಂಗಳೂರು ಅನಂತನಾಥ ಸ್ವಾಮಿ ಜಿನಚೈತ್ಯಾಲಯದಲ್ಲಿ ಚಾರ್ತುಮಾಸ ವ್ರತಾಚರಣೆ ಪ್ರಯುಕ್ತ ಮುನಿಶ್ರೀ 108 ವೀರಸಾಗರ ಮಹಾರಾಜ ಇವರಿಂದ ರವಿವಾರ ಸಂಜೆ ನಡೆದ ಭವ್ಯ ಮಂಗಲ ಪ್ರವಚನ ಕಾರ್ಯಕ್ರಮ ನಡೆಯಿತು.
ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಜೈನಮುನಿಗಳಿಂದ ದೇಶದ ಜನರಲ್ಲಿ ಪರಸ್ಪರ ಸೌಹಾರ್ದತೆ ಜೊತೆಗೆ ನಿಷ್ಕಲ್ಮಶ ಮನಸ್ಸು ಮತ್ತು ಸರಳ ಜೀವನ ನಡೆಸುವ ಬಗ್ಗೆ ಬದುಕಿನ ಪಾಠ ಸಿಗುತ್ತದೆ ಎಂದರು.
ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ಆನಂದ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ವಕೀಲ ಅಶ್ವನಿ ಕುಮಾರ್ ರೈ, ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಪ್ರಮುಖರಾದ ಅಶೋಕ್ ಕುಮಾರ್, ಪರಮೇಶ್ವರ್, ಮೋಹನ್.ಪಿ.ಎಸ್, ಡಿ.ಎಂ.ಕುಲಾಲ್, ಸೀತಾರಾಮ ಶೆಟ್ಟಿ, ಭವಾನಿ ಶಂಕರ್ ವಸಂತ ಪ್ರಭು, ಚಾತುರ್ಮಾಸ ಸಮಿತಿ ಅಧ್ಯಕ್ಷ ರತ್ನಾಕರ ಜೈನ್, ಕಾರ್ಯಾಧ್ಯಕ್ಷ ಸುದರ್ಶನ ಜೈನ್, ಕಾರ್ಯದರ್ಶಿ ಧರಣೇಂದ್ರ ಜೈನ್, ಪದಾಧಿಕಾರಿ ಸುಭಾಶ್ಚಂದ್ರ ಜೈನ್, ಪ್ರವೀಣ್ ಕುಮಾರ್, ಹರ್ಷರಾಜ ಬಲ್ಲಾಳ್, ಆದಿರಾಜ ಜೈನ್, ಭರತ್ ರಾಜ ಜೈನ್, ಯಶೋಧರ ಪೂವಣಿ ಮತ್ತಿತರರು ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.