×
Ad

ಮಯನ್ಮಾರ್ ಸರಕಾರದ ತೀರ್ಪನ್ನು ಮರುಪರಿಶೀಲನೆ ನಡೆಸಿ ಮುಸ್ಲಿಮರಿಗೆ ರಕ್ಷಣೆ ನೀಡಿ: ಬಾಯರ್ ತಂಙಳ್ ಮನವಿ

Update: 2017-09-17 22:56 IST

ಬಾಯರ್, ಸೆ. 17:  ಮಯನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ಮಾರಣ ಹೋಮ ಕ್ರೌರ್ಯ ಕಳವಳಕಾರಿಯಾದುದ್ದು ಮತ್ತು ಹೃದಯ ವಿದ್ರಾವಕವಾದುದು. ಮಯನ್ಮಾರ್ ಸರಕಾರದ ಆದೇಶದ ಮೇರೆಗೆ ಆ ದೇಶದ ಸೈನ್ಯ ಮತ್ತು ಅರಕಾನ್ ಬೌದ್ಧರು ರೋಹಿಂಗ್ಯಾ ಮುಸ್ಲಿಮರನ್ನು ಸರ್ವನಾಶ ಮಾಡುತ್ತಿದ್ದು ಮಯನ್ಮಾರ್ ಸರಕಾರದ ಈ ತೀರ್ಪನ್ನು ಮರುಪರಿಶೀಲನೆ ನಡೆಸಿ ಮುಸ್ಲಿಮರಿಗೆ ರಕ್ಷಣೆ ನೀಡಬೇಕು ಎಂದು ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ಅಲ್-ಬುಖಾರಿ ಬಾಯಾರ್ ತಂಙಳ್ ಹೇಳಿದರು.

ಅವರು ಕಾಸರಕೋಡುವಿನ ಬಾಯಾರ್ ಮುಜಮ್ಮವು ಸಖಾಪತಿ ಸುನ್ನಿಯ್ಯಿ ಸಂಸ್ಥೆಯ ಸ್ವಲಾತ್ ಮಜ್ಲಿಸ್ ಮತ್ತು ಮರ್ಹೂಂ ಪೊಸೋಟು ಉಮರುಲ್ ಫಾರೂಕ್ ತಂಙಳ್ ಅನುಸ್ಮರಣೆ ಕಾರ್ಯಕ್ರಮ ನೇತೃತ್ವವಹಿಸಿ ಮತನಾಡಿದರು.

ಇತ್ತಿಚೆಗಿನ ಎಲ್ಲಾ ಪ್ರಕರಣಗಳನ್ನು ನೋಡಿದಾಗ ಪ್ರವಾದಿ ಹೆಳೀದ ಜಗತ್ತಿನ ಅಂತ್ಯ ದಿನದ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಮುಸ್ಲಮಾನರು ತನ್ನ ಜೀವನದಲ್ಲಿ ನಡೆದ ತಪ್ಪುಗಳನ್ನು ದೇವನದಲ್ಲಿ ಕ್ಷಮೆಯಾಚಿಸಲು ಮುಂದಾಗಬೇಕು ಎಂದು ಹೇಳಿದರು. 

ಬಾಯಾರ್ ಮುಜಮ್ಮವುಸಖಾಪತಿ ಸುನ್ನಿಯ್ಯಿ ಸಂಸ್ಥೆಯ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ಅಲ್-ಬುಖಾರಿ ಬಾಯಾರ್ ತಂಙಳ್  ಕಾರ್ಯಕ್ರಮಕ್ಕೆ ನೇತೃತ್ವವಹಿಸಿದರು. ಸಮಸ್ತ ಕೇರಳ ಸುನ್ನೀ ಯುವಜನ ಸಂಘ ಅಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಪಯಸ್ವಿ ಮುಖ್ಯ ಪ್ರಭಾಷಣಗೈದರು. ಬಾಯಾರ್ ಮುಜಮ್ಮವುಸಖಾಪತಿ ಸುನ್ನಿಯ್ಯಿದ ಅಂಗ್ಲ ಮಾಧ್ಯಮ ವಿದ್ಯಾರ್ಥಿಗಳು ರಚಿಸಿದ ಕೈಬರಹ ಮಾಸಿಕವನ್ನು ಪುತ್ತು ಮೋನು ಹಾಜಿ ಚಿಕ್ಕಮಗಳೂರುಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.

ಜಮಾಲುಲೈಲಿ ತಂಙಳ್, ಸಮಸ್ತ ಕೇರಳ ಸುನ್ನೀ ಯುವಜನ ಸಂಘ ಕಾಸರಕೋಡು ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಜಲಾಲುದ್ದೀನ್ ತಂಙಳ್ ಮಳ್‌ಹರ್, ಸಕಲೇಶಪುರ ತಂಙಳ್, ಅಲ್-ಮದೀನಾ ವಿದ್ಯಾ ಸಂಸ್ಥೆಯ  ಅಬ್ಬಾಸ್ ಉಸ್ತಾದ್ ಮಂಜನಾಡಿ, ಸಮಸ್ತ ಕೇರಳ ಸುನ್ನೀ ಯುವಜನ ಸಂಘ ಉಪಾಧ್ಯಕ್ಷ ಪಲ್ಲಂಗೋಡು ಅಬ್ದುಲ್ ಖಾದರ್ ಮದನಿ, ಮುಹೀಮ್ಮತ್ ಮುಸ್ಲಿಮೀನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಸ್ ಉಸ್ತಾದ್, ಕಡ್ವತ್ತೂರು ಖಾಝಿ, ರಫೀಕ್ ಸಅದಿ ದೇಲಂಪಾಡಿ, ಹಂಝ ವಿಸ್ಬಾಯಿ, ಉಮರ್ ಸಖಾಫಿ ಮುಹಿಮ್ಮತ್, ಬಶೀರ್ ಸಖಾಫಿ ಕೊಲ್ಯಂ, ಅಶ್ರಫ್ ಹಾಜಿ ಅಡ್ಯಾರ್, ಉಮರ್ ಹಾಜಿ, ಇಬ್ರಾಹೀಂ ಕುಟ್ಟಿ ಹಾಜಿ ಚೆಮ್ಮಾಡ್, , ಅಶ್ರಫ್ ಹಾಜಿ ಮಲ್ಲೂರು, ಶಾಕೀರ್ ಹಾಜಿ ಮಿತ್ತೂರು, ಕಡ್ವತ್ತೂರು ಅಬ್ದುಲ್ಲಾ ಮುಸ್ಲಿಯಾರ್, ನಾಸೀರ್ ಬಾಳೆಹ್ನೂರು, ಉದ್ಯಮಿಗಳಾದ ಸಿದ್ದೀಕ್ ಹಾಜಿ, ಅಶ್ರಫ್ ಹಾಜಿ ಈ ಸಂದರ್ಭ ಉಪಸ್ಥಿತರಿದರು.

ಸಂಸ್ಥೆಯ ಮ್ಯಾನೇಜರ್ ಸಿದ್ದೀಕ್ ಸಖಾಫಿ ಬಾಯರ್ ಸ್ವಾಗತಿಸಿದರು, ಪೋಯ್ಯತ್ತಬೈಲ್ ಖತೀಬ್ ಜಬ್ಬಾರ್ ಸಖಾಫಿ ಪಾತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News