×
Ad

ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಭೇಟಿ

Update: 2017-09-18 20:03 IST

ಮಂಗಳೂರು, ಸೆ. 18: ಬಿಐಟಿಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಭೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವ ಮೊದಲು ಪ್ರಾರ್ಥನೆ ನಡೆಯಿತು. ನಂತರ ಪ್ರೊಫೆಸರ್ ಮುಸ್ತಫಾ ಬಸ್ತಿಕೋಡಿ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥರು ತಮ್ಮ ಸ್ವಾಗತ ಭಾಷಣದಲ್ಲಿ ನೂರ ಹನ್ನೊಂದು ವರ್ಷಗಳಲ್ಲಿ ಬ್ಯಾರೀಸ್ ಶಿಕ್ಷಣ ಗುಂಪು ತ್ವರಿತ ಪ್ರಗತಿಯ ಬಗ್ಗೆ ಹೇಳಿದರು.

ನಂತರ ಪ್ರಾಂಶುಪಾಲರಾದ ಡಾ. ಆ್ಯಂಟನಿ ಎ.ಜೆ. ಮಾತನಾಡಿ ಭಾರತೀಯರ ಸಹಿಷ್ಣು ಸ್ವಭಾವವನ್ನು ವಿವರಿಸಿ, ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕೆಂಬ ಹಾಗೂ ನಮ್ಮ ರಾಷ್ಟ್ರವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಇಸಿಇ ವಿಭಾಗದ ಪ್ರೊಫೆಸರ್ ಜಮೀಲ್ ವಂದಿಸಿದರು. ಮಂಗಳೂರು ಮತ್ತು ಇಲ್ಲಿನ ಅಧ್ಯಯನದ ಬಗ್ಗೆ ವಿದೇಶಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಇಸಿಇ ವಿಭಾಗದ ಮುಖ್ಯಸ್ಥ  ಡಾ. ಅಬ್ದುಲ್ಲಾ ಗುಬ್ಬಿ, ಸಿವಿಲ್ ವಿಭಾಗದ ಮುಖ್ಯಸ್ಥ  ಪ್ರೊ. ಪುರುಶೋತ್ತಮ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ವಿವೇಕ್ ಹಡ್ಡರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News