×
Ad

ಭಟ್ಕಳ: ಮನೆಗೆ ನುಗ್ಗಿ ಕಳವಿಗೆ ಯತ್ನ

Update: 2017-09-18 20:41 IST

ಭಟ್ಕಳ, ಸೆ. 18: ಇಲ್ಲಿನ ಮದೀನಾ ಕಾಲನಿ ಬಳಿಯ ಸೈಯದ್ ಅಮ್ಜದ್ ಬರ್ಮಾವರ್ ಎಂಬವವರ ಮನೆಯಲ್ಲಿ  ಕಳ್ಳತನಕ್ಕೆ ಪ್ರಯತ್ನಿಸಿದ್ದು ಮನೆಯಲ್ಲಿ ಹಣ, ಆಭರಣಗಳು ಸಿಗದೆ ಬರಿಗೈಯಿಂದ ಮರಳಿದ್ದಾರೆ.

ಮನೆಯ ಮುಂಬಾಗಿಲು ಮುರಿದು ನುಗ್ಗಿದ ಕಳ್ಳರು ಮನೆಯಲ್ಲಿರುವ ಬೀರುವನ್ನು ಮುರಿದಿದ್ದಾರೆ. ಅಲ್ಲಿ ಯಾವುದೇ  ವಸ್ತು ಸಿಗದೆ ಇದ್ದಾಗ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಮರಳಿದ್ದಾರೆ.

ಮನೆಯ ಮಾಲಕ ಕಳೆದ ಒಂದು ತಿಂಗಳಿಂದ ದುಬೈಯಲ್ಲಿ ವಾಸಿಸುತ್ತಿದ್ದರು ಎನ್ನಗಿದ್ದು ಇಂದು ಬೆಳಗ್ಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದುಕೊಂಡಿದ್ದನ್ನು ಗಮನಿಸಿದ್ದಾರೆ. ಭಟ್ಕಳದಲ್ಲಿ ದಿನೆ ದಿನೆ ಕಳುವು ಪ್ರಕರಣ ಹೆಚ್ಚಾಗುತ್ತಿರುವುದನ್ನು ಅರಿತ ಅವರು ದುಬೈಗೆ ಹೋಗುವ ಸಂದರ್ಭದಲ್ಲಿ ಮನೆಯಲ್ಲಿರುವ  ಬೆಲೆಬಾಳುವ ವಸ್ತುಗಳನ್ನು ತಮ್ಮ ಸಂಬಂಧಿಕರ ಬಳಿ ಇಟ್ಟು ಹೋಗಿದ್ದರು ಎಂದು ಹೇಳಲಾಗುತ್ತಿದೆ.

ಸೈಯ್ಯದ್ ಮುಹಿದ್ದೀನ್ ಬರ್ಮಾವರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೂ ಇಲ್ಲಿನ ಹನೀಫಾಬಾದ್ ನಲ್ಲಿರುವ ಮುಝಮ್ಮಿಲ್ ಬರ್ಮಾವರ್ ಎನ್ನುವವರ ಮನೆಯು ಕಳುವು ಯತ್ನ ಮಾಡಿದ್ದ ದುಷ್ಕರ್ಮಿಗಳು ಅಲ್ಲಿಯೂ ಯಾವುದೇ  ವಸ್ತುಗಳು ಸಿಗದೆ ಬರಿಗೈಯಿಂದ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News