×
Ad

ಬಾಲಕಿ ನಾಪತ್ತೆ

Update: 2017-09-18 21:26 IST

ಮಂಗಳೂರು, ಸೆ.18: ಪ್ರಜ್ಞಾ ಸ್ವಾಧಾರ ಗೃಹದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಸೆ.12 ರಂದು ದಾಖಲಾದ ಬಾಲಕಿ ಆಲಿಯ (16) ಎಂಬಾಕೆ ಸೆ. 16 ರಂದು ಬೆಳಗ್ಗೆ 7 ಗಂಟೆಗೆ ಕಾಣೆಯಾಗಿದ್ದಾಳೆ.

ಜಾರ್ಖಂಡ್ ರಾಜ್ಯದ ರಾಂಚಿಯ ರೈಲ್ವೆ ಸ್ಟೀಶನ್ ಬಳಿಯ ನಿವಾಸಿ ಗುಡ್ಡು ಎಂಬವರ ಪುತ್ರಿಯಾಗಿದ್ದಾಳೆ. ಕೋಲು ಮುಖದ ಚಹರೆ, ಎತ್ತರ- 4 ಅಡಿ, ಗೋದಿ ಮೈಬಣ್ಣ, ವಿಧ್ಯಾಭ್ಯಾಸ 4ನೆ ತರಗತಿ, ಹಿಂದಿ ಮಾತನಾಡಬಲ್ಲವಳಾಗಿದ್ದಾಳೆ.

ಆಲಿಯ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿ, ಕಂಕನಾಡಿ ನಗರ ಠಾಣೆ, ದೂರವಾಣಿ ಸಂಖ್ಯೆ: 0824-2220529 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News