ಮೀನುಗಾರ ನಾಪತ್ತೆ
Update: 2017-09-18 21:37 IST
ಗಂಗೊಳ್ಳಿ, ಸೆ.18: ಗಂಗೊಳ್ಳಿ ಬಂದರಿನಲ್ಲಿ ಸೆ.17ರಂದು ಬೆಳಗ್ಗೆ 8ಗಂಟೆಗೆ ನಿಲ್ಲಿಸಿದ್ದ ಬೋಟಿನಲ್ಲಿ ಇದ್ದ ಮೀನುಗಾರರೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದವರನ್ನು ಭಟ್ಕಳದ ಕೃಷ್ಣ ಕುಮಾರ ಖಾರ್ವಿ(35) ಎಂದು ಗುರುತಿಸಲಾಗಿದೆ. ಗಂಗೊಳ್ಳಿಯ ಶಾಯಿ ಪಂಡರಿ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಕೃಷ್ಣ ಕುಮಾರ್ ನಾಪತ್ತೆಯಾಗಿದ್ದು, ಅವರ ಚಪ್ಪಲಿ ಹಾಗೂ ಮೊಬೈಲ್ ಬೋಟಿನಲ್ಲೇ ಇರುವುದು ಕಂಡುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.