ಚಂದ್ರಶೇಖರ ಶೆಟ್ಟಿ ಕೆಪಿಸಿಸಿ ಐಟಿ ಸೆಲ್‌ನ ಪ್ರ.ಕಾರ್ಯದರ್ಶಿ
Update: 2017-09-18 22:16 IST
ಕುಂದಾಪುರ, ಸೆ.18: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಐಟಿ ಸೆಲ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕುಂದಾಪುರದ ಚಂದ್ರಶೇಖರ ಶೆಟ್ಟಿ ಅವರನ್ನು ಮುಂದಿನ ಅವಧಿಗೆ ನೇಮಕಗೊಳಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾದ ಜಿ. ಪರಮೇಶ್ವರ ಅವರ ಆದೇಶದ ಮೇರೆಗೆ ಈ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷ ಪಿ.ಎಸ್.ನಿರಂಜನ್ ರಾವ್ ತಿಳಿಸಿದ್ದಾರೆ. ಚಂದ್ರಶೇಖರ ಶೆಟ್ಟಿ ಅವರು ಹಿಂದಿನ ಅವಧಿಯಲ್ಲಿ ಕೆಪಿಸಿಸಿ ಐಟಿ ಸೆಲ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಪದೋನ್ನತಿ ಗೊಂಡಿದ್ದಾರೆ. ಇವರು ಹವ್ಯಾಸಿ ವ್ಯಂಗ್ಯಚಿತ್ರಕಾರರೂ, ಸಕ್ರಿಯ ಅಂತರ್ಜಾಲ ಬರಹಗಾರರಾಗಿರೂ ಆಗಿದ್ದಾರೆ.