×
Ad

‘ಪೆಟ್ರೋಲ್-ಡಿಸೇಲ್ ಬೆಲೆ ನಿಯಂತ್ರಣಕ್ಕೆ ಕೇಂದ್ರ ವಿಫಲ’

Update: 2017-09-18 22:46 IST

ಉಡುಪಿ, ಸೆ.18: ಕೇಂದ್ರ ಸರಕಾರ ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿರುವುದರಿಂದ ಜನಸಾಮ್ಯಾನರಿಗೆ ತೊಂದರೆ ಯಾಗುತ್ತಿದೆ ಎಂದು ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಸರಕಾರದ ಕ್ರಮವನ್ನು ಖಂಡಿಸಿದೆ.

ನರೇಂದ್ರ ಮೋದಿ ಪ್ರಧಾನಿಯಾದಾಗ ‘ಅಚ್ಛೇದಿನ್’ ತರುವುದಾಗಿ ಹೇಳಿದ್ದರು. ಅವರು ಪ್ರಧಾನಿಯಾಗಿ ನಾಲ್ಕು ವರ್ಷಗಳಾದರೂ ಜನರಿಗೆ ಅಚ್ಛೇದಿನ್ ಬರಲೇ ಇಲ್ಲ. ಬದಲಿಗೆ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸರಕು ಸಾಗಾಣೆಕೆಯೂ ದುಬಾರಿಯಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರ ದೈನಂದಿನ ಜೀವನವೇ ಕಷ್ಟಕರವಾಗುತ್ತಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ನೋಟ್‌ಬ್ಯಾನ್‌ನಂತಹ ಕ್ರಮಗಳಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ ಜನಸಾಮಾನ್ಯರ ಮೇಲೆ ಆರ್ಥಿಕ ಗದಾಪ್ರಹಾರ ನಡೆಸಿದ ಕೇಂದ್ರ ಸರಕಾರ, ಜನಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹೊರಿಸುತ್ತಿದೆ. ಒಂದೆಡೆ ಉರುವಲು ಬದಲಿಗೆ ಎಲ್‌ಪಿಜಿ ಬಳಸಿ ಎಂದು ಪ್ರಚಾರ ಮಾಡುತ್ತಲೇ ಗ್ಯಾಸ್ ಬೆಲೆಯನ್ನೂ ದಿನೇ ದಿನೇ ಹೆಚ್ಚಿಸುತ್ತಿದೆ. ಇದರೊಂದಿಗೆ ಗ್ಯಾಸ್‌ಗೆ ನೀಡುತ್ತಿದ್ದ ಸಬ್ಸಿಡಿ ರದ್ದು ಗೊಳಿಸಲು ಮುಂದಾಗಿರುವುದು ಖಂಡನೀಯ. ಕೂಡಲೇ ಕೇಂದ್ರ ಸರ್ಕಾರ ಇಂತಹ ಕ್ರಮಗಳನ್ನು ಕೈಬಿಡಬೇಕು ಎಂದು ಎನ್‌ಎಸ್‌ಯುಐ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News