ಸೆ.20: ಕೆಳಾರ್ಕಳಬೆಟ್ಟಿನಲ್ಲ್ಲಿ ಕೃಷಿ ಮಾಹಿತಿ
Update: 2017-09-18 22:47 IST
ಉಡುಪಿ, ಸೆ.18: ಉಡುಪಿ ಜಿಲ್ಲಾ ಕೃಷಿಕ ಸಂಘದ ಕೆಮ್ಮಣ್ಣು-ಕಲ್ಯಾಣಪುರ ವಲಯ ಸಮಿತಿ ಆಯೋಜಿಸಿರುವ ಕೃಷಿ ಮಾಹಿತಿ ಕಾರ್ಯಕ್ರಮ, ಸೆ.20ರ ಸಂಜೆ 4:30ಕ್ಕೆ ಕೆಳಾರ್ಕಳಬೆಟ್ಟು ರಘುಪತಿ ನಾಯ್ಕೆ (ಶಾಲೆಯ ಬಳಿ) ಇವರ ಮನೆ ವಠಾರದಲ್ಲಿ ನಡೆಯಲಿದೆ.
ಕಳತ್ತೂರಿನಲ್ಲಿ: ಕೃಷಿಕ ಸಂಘದ ಕಾಪು ವಲಯ ಸಮಿತಿ ಆಯೋಜಿಸಿರುವ ಕೃಷಿ ಮಾಹಿತಿ ಕಾರ್ಯಕ್ರಮ ಸೆ.21ರ ಸಂಜೆ 4:30ಕ್ಕೆ ಕಳತ್ತೂರು ಪ್ರೌಢ ಶಾಲೆ ಬಳಿಯ ವೇಣುಗೋಪಾಲ ಎಂ.ಇವರ ಮನೆ ವಠಾರದಲ್ಲಿ ನಡೆಯಲಿದೆ.
ಮಾಹಿತಿದಾರರಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಹಾಗೂ ಸಾಧನಾಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ.