ಚೀನಾ-ನೇಪಾಳ ಹೆದ್ದಾರಿಯಿಂದ ಭಾರತಕ್ಕೆ ‘ಕಿರಿಕಿರಿ’

Update: 2017-09-18 17:42 GMT

ಬೀಜಿಂಗ್, ಸೆ. 18: ಟಿಬೆಟ್‌ನಲ್ಲಿ ನಿರ್ಮಿಸಲಾಗಿರುವ ನೂತನ ಆಯಕಟ್ಟಿನ ಹೆದ್ದಾರಿಯೊಂದು ಈ ವಲಯವನ್ನು ನೇಪಾಳದೊಂದಿಗೆ ಸಂಪರ್ಕಿಸುತ್ತದೆ ಹಾಗೂ ಇದನ್ನು ಸೇನಾ ಉದ್ದೇಶಗಳಿಗಾಗಿ ಬಳಸಬಹುದಾಗಿದೆ ಎಂದು ಚೀನಾದ ಸರಕಾರಿ ಮಾಧ್ಯಮ ಸೋಮವಾರ ಹೇಳಿದೆ.

25 ಮೀಟರ್ ಅಗಲದ ಹೆದ್ದಾರಿಯನ್ನು ಸೇನಾ ವಾಹನಗಳು ಬಳಸಬಹುದಾಗಿದೆ ಹಾಗೂ ಅಗತ್ಯ ಬಿದ್ದರೆ ಸೇನಾ ವಿಮಾನಗಳಿಗೆ ರನ್‌ವೇಯಾಗಿಯೂ ಬಳಸಬಹುದಾಗಿದೆ ಎಂದು ಪರಿಣತರು ಹೇಳಿದ್ದಾರೆ.

ಈ ಬೆಳವಣಿಗೆಯಿಂದ ಭಾರತಕ್ಕೆ ‘ಇರಿಸುಮುರಿಸು’ ಆಗಬಹುದಾಗಿದೆ ಎಂಬುದಾಗಿಯೂ ‘ಗ್ಲೋಬಲ್ ಟೈಮ್ಸ್’ ಟ್ಯಾಬ್ಲಾಯ್ಡಾ ತನ್ನ ವರದಿಯೊಂದರಲ್ಲಿ ಹೇಳಿದೆ.

40.4 ಕಿ.ಮೀ. ಉದ್ದದ ಹೆದ್ದಾರಿಯನ್ನು ಮುಂದೆ ಚೀನಾ-ನೇಪಾಳ ರೈಲ್ವೆಗೆ ಭವಿಷ್ಯದಲ್ಲಿ ಸಂಪರ್ಕಿಸುವ ಸಾಧ್ಯತೆಯಿದೆ ಎಂದುದ ಪರಿಣತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News