×
Ad

ಸಾಲ್ಮರ ರೈಲ್ವೇ ಗೇಟ್‌ಗೆ ಪಿಕಾಪ್ ಜೀಪ್ ಢಿಕ್ಕಿ

Update: 2017-09-19 20:12 IST

ಪುತ್ತೂರು, ಸೆ. 19: ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಸಾಲ್ಮರದಲ್ಲಿರುವ ರೈಲ್ವೇ ಗೇಟ್‌ಗೆ ಪಿಕಾಪ್ ಜೀಪು ಢಿಕ್ಕಿಯಾದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಸಾಲ್ಮರ ಎಪಿಎಂಸಿ ರಸ್ತೆಯಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಪಿಕಾಪ್ ಜೀಪು ಸಾಲ್ಮರ ರೈಲ್ವೇ ಗೇಟ್‌ಗೆ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರೈಲ್ವೇ ಗೇಟ್ ತುಂಡಾಗಿ ಬಿದಿದ್ದು ಘಟನೆಗೆ ಸಂಬಂಧಿಸಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಿಕಾಪ್ ಚಾಲಕ ಡೆನ್ನಿಸ್ ಡಿ ಸೋಜ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ರೈಲ್ವೇ ಪೊಲೀಸರು ಆರೋಪಿಯನ್ನು ಸೆ.18ರಂದು ಬೆಳಿಗ್ಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಶರತ್ತು ಬದ್ಧ ಜಾಮೀನು ಮಂಜೂರುಗೊಳಿಸಿದೆ. ಆರೋಪಿ ಪರ ವಕೀಲರಾದ ನರಸಿಂಹ ಪ್ರಸಾದ್, ಜಯಾನಂದ ಕೆ, ಶ್ಯಾಮ, ಮುರಳಿಕೃಷ್ಣ ಚಲ್ಲಂಗಾರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News