×
Ad

ಸೆ. 21: ದುರ್ಗಿಪಳ್ಳ ನೂತನ ಮಸೀದಿ, ಮದ್ರಸಾ ಕಟ್ಟಡದ ಉದ್ಘಾಟನೆ

Update: 2017-09-19 20:18 IST

ಮಂಜೇಶ್ವರ, ಸೆ. 19: ದುರ್ಗಿಪಳ್ಳ ದಾರುಲ್ ಉಲೂಂ ಸಮಿತಿ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಿದ ಮಸೀದಿ ಹಾಗೂ ಮದ್ರಸಾ ಕಟ್ಟಡದ ಉದ್ಘಾಟನೆ ಸೆಪ್ಟಂಬರ್ 21 ರಂದು ಸಂಜೆ ನಡೆಯಲಿದೆ.

ಸಮಸ್ತ ಕೇರಳ ಜಂಈಯ್ಯತ್ತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕ್ಕೋಯ ತಂಘಳ್ ಉದ್ಘಾಟಿಸುವರು. ಸಯ್ಯಿದ್ ಅತಾವುಲ್ಲಾ ತಂಘಳ್ ದುವಾಗೆ ನೇತೃತ್ವ ನೀಡುವರು. ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಘಳ್ ಪೊಸೋಟ್ ಅಧ್ಯಕ್ಷತೆ ವಹಿಸುವರು. ಎಂ.ಎ ಖಾಸಿಂ ಮುಸ್ಲಿಯಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಹಮ್ಮದ್ ಹನೀಫ್ ನಿಝಾಮಿ ಮುಖ್ಯ ಭಾಷಣ ಮಾಡುವರು.

ಶಾಸಕ ಪಿ.ಬಿ ಅಬ್ದುಲ್ ರಝಾಕ್ , ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ ಬಶೀರ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರುವರು. ಮಗ್ರಿಬ್ ನಮಾಜಿನ ಬಳಿಕ ಮಜ್ಲಿಸುನ್ನೂರು ನಡೆಯಲಿದೆ. ಸಯ್ಯಿದ್ ಅಲೀ ತಂಘಳ್ ಕುಂಬೋಳ್ ನೇತೃತ್ವ ನೀಡುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News