ಸೆ.23: ಉಡುಪಿಯಲ್ಲಿ ‘ಸಾಹಿತ್ಯ, ಮಾಧ್ಯಮಗಳು’ ವಿಚಾರ ಸಂಕಿರಣ

Update: 2017-09-19 15:31 GMT

ಉಡುಪಿ, ಸೆ.19: ಸಾಹಿತ್ಯ ಅಕಾಡಮಿ ಬೆಂಗಳೂರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ವಿಶ್ವವಿದ್ಯಾಲಯ ಹಾಗೂ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಸೆ.23ರ ಶನಿವಾರ ‘ಸಾಹಿತ್ಯ ಮತ್ತು ಮಾಧ್ಯಮಗಳು’ ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಖ್ಯಾತ ಲೇಖಕ ಹಾಗೂ ಪತ್ರಕರ್ತ ಎಸ್. ದಿವಾಕರ್ ವಿಚಾರ ಸಂಕಿರಣವನ್ನು ಬೆಳಗ್ಗೆ 10  ಗಂಟೆಗೆ ಉದ್ಘಾಟಿಸಲಿದ್ದಾರೆ. ಮಣಿಪಾಲ ವಿವಿಯ ಕುಲಪತಿಗಳಾದ ಡಾ.ಎಚ್.ವಿನೋದ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್, ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ. ಮಹಾಲಿಂಗೇಶ್ವರ, ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸದಸ್ಯ ಜಯಪ್ರಕಾಶ್ ಮಾವಿನಕುಳಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೆೀಶ್ ಹಿರೇಗಂಗೆ ಉಪಸ್ಥಿತರಿರುವರು. ಅಪರಾಹ್ನ 3 ಕ್ಕೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಎ.ಈಶ್ವರಯ್ಯ ವಹಿಸಲಿದ್ದು, ಖ್ಯಾತ ವಿದ್ವಾಂಸ ಡಾ. ಬಿ.ಎ ವಿವೇಕ್ ರೈ ಸಮಾರೋಪ ಭಾಷಣ ಮಾಡಲಿರುವರು. 11:30ಕ್ಕೆ ನಡೆಯುವ ವಿಚಾರ ಸಂಕಿರಣದಲ್ಲಿ ಎಸ್.ಬಿ.ಜೋಗುರ್ (ಸಾಹಿತ್ಯ ಮತ್ತು ಪತ್ರಿಕೆ), ಟಿ.ಸಿ ಪೂರ್ಣಿಮಾ (ಸಾಹಿತ್ಯಮತ್ತು ದೂರದರ್ಶನ), ಭಾಗ್ಯಜ್ಯೋತಿ ಹಿರೇಮಠ (ಸಾಹಿತ್ಯ ಮತ್ತು ಚಲನಚಿತ್ರ) ಹಾಗೂ ಜಿ.ಎನ್. ಮೋಹನ್ (ಸಾಹಿತ್ಯ ಮತ್ತು ನವ ಮಾಧ್ಯಮ) ವಿಷಯಗಳ ಕುರಿತು ಪ್ರಬಂಧ ಮಂಡಿಸಲಿದ್ದಾರೆ ಎಂದು ಪ್ರೊ.ವರದೇಶ್ ಹಿರೇಗಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News