ಒಡಿಶಾ ಸೀಶೋರ್ ಚಿಟ್ ಫಂಡ್ ಹಗರಣ: ಬಿಜೆಡಿ ಶಾಸಕ ಪ್ರಭಾತ್ ಬಿಸ್ವಾಸ್ ಬಂಧನ

Update: 2017-09-19 16:30 GMT

ಭುವನೇಶ್ವರ, ಸೆ. 19: ಒಡಿಶಾದ ಸೀಸೋರ್ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಬಿಜೆಡಿಯ ಶಾಸಕ ಪ್ರಭಾತ್ ಬಿಸ್ವಾಸ್ ಅವರನ್ನು ಸಿಬಿಐ ಮಂಗಳವಾರ ಬಂಧಿಸಿದೆ.

ಬಿಸ್ವಾಸ್ ಅವರನ್ನು ಸೋಮವಾರ ರಾತ್ರಿ ಕಥಕ್‌ನಲ್ಲಿರುವ ಅವರ ನಿವಾಸದಿಂದ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಮಂಗಳವಾರ ಬೆಳಗ್ಗೆ ಬಂಧಿಸಿರುವುದಾಗಿ ಘೋಷಿಸಲಾಯಿತು. ಸೀಶೋರ್ ಗುಂಪಿನ ಮುಖ್ಯಸ್ಥ ಪ್ರಶಾಂತ್ ದಾಸ್ ಅವರೊಂದಿಗೆ ಭೂ ವ್ಯವಹಾರ ಮಾಡಿರುವುದಕ್ಕೆ ಸಂಬಂಧಿಸಿ ಕಥಕ್-ಚೌದ್ವಾರ್ ಬಿಜೆಡಿ ಶಾಸಕನನ್ನು ಈ ಹಿಂದೆ ನಾಲ್ಕು ಬಾರಿ ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಜೈಪುರ ಬೇನಾಪುರದ ಭೂ ಹಗರಣಕ್ಕೆ ಸಂಬಂಧಿಸಿ ಪ್ರಭಾತ್ ಬಿಸ್ವಾಲ್ ಅವರ ಪತ್ನಿ ಲಕ್ಷ್ಮೀಬಿಲಾಸಿನಿ ಬಿಸ್ವಾಸ್ ಅವರನ್ನು ಕೂಡ ಈ ಹಿಂದೆ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News