ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ 18 ಬಂಡಾಯ ಶಾಸಕರು

Update: 2017-09-19 15:43 GMT

ಚೆನೈ, ಸೆ. 19: ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವೈಯುಕ್ತಿಕ ರಿಟ್ ಅರ್ಜಿ ದಾಖಲಿಸಲು ಎಐಎಡಿಎಂಕೆಯ 18 ಅನರ್ಹಗೊಂಡ ಶಾಸಕರಿಗೆ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಂ. ದೊರೈಸ್ವಾಮಿ ಮಂಗಳವಾರ ಅನುಮತಿ ನೀಡಿದ್ದಾರೆ.

ಅನರ್ಹಗೊಂಡ ಶಾಸಕರ ಪರ ಹಾಜರಾದ ಹಿರಿಯ ನ್ಯಾಯವಾದಿ ಪಿ.ಆರ್. ರಾಮನ್, ಈ ವಿಷಯದಲ್ಲಿ ತುರ್ತು ತೀರ್ಪು ಅಗತ್ಯವಿರುವುದರಿಂದ ಬುಧವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ವಿನಂತಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಈ ಅನುಮತಿ ನೀಡಿದ್ದಾರೆ.

18 ಮಂದಿ ಶಾಸಕರನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಎತ್ತಿಕೊಳ್ಳದೇ ಇದ್ದಲ್ಲಿ ಬಹುಮತ ಸಾಬೀತುಪಡಿಸುವ ಸಂದರ್ಭ ಈ ಶಾಸಕರು ಮತ ಚಲಾಯಿಸುವಲ್ಲಿ ತೊಂದರೆ ಉಂಟಾಗಬಹುದು ಎಂದು ಪಿ.ಆರ್. ರಾಮನ್ ಹೇಳಿದ್ದಾರೆ.

ಅರ್ಜಿಯನ್ನು ಬುಧವಾರ ವಿಚಾರಣೆಗೆ ಎತ್ತಿಕೊಳ್ಳಲು ಒಪ್ಪಿರುವ ನ್ಯಾಯಾಧೀಶರು, ಸಮರ್ಪಕ ದಾವೆ ದಾಖಲಿಸುವಂತೆ ನಿರ್ದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News