ತೇಜಸ್ವಿ ನವ್ಯೋತ್ತರ ಕಾಲದ ವಿಶಿಷ್ಟ ಬರಹಗಾರ: ವೆಂಕಟೇಶ್

Update: 2017-09-19 16:10 GMT

ಉಡುಪಿ, ಸೆ.19: ಪೂರ್ಣಚಂದ್ರ ತೇಜಸ್ವಿ ನವ್ಯೋತ್ತರ ಕಾಲದ ವಿಶಿಷ್ಟ ಬರಹಗಾರರು. ಕನ್ನಡ ಸಾಹಿತ್ಯದಲ್ಲಿ ತನ್ನದೇ ಮಾರ್ಗವನ್ನು ಕಂಡುಕೊಂಡವರು. ರಾಮ್‌ಮನೋಹರ ಲೋಹಿಯಾ, ಶಿವರಾಮ ಕಾರಂತ ಹಾಗೂ ಕುವೆಂಪು ಅವರಿಂದ ಪ್ರಭಾವಿತರಾದ ತೇಜಸ್ವಿ, ಇವರೆಲ್ಲರ ತತ್ವಾದರ್ಶಗಳನ್ನು ಮೈಗೂಡಿಸಿ ಕೊಂಡರೂ ಅವರೆಲ್ಲರಿಗಿಂತ ಭಿನ್ನವಾಗಿ ಬೆಳೆದರು ಎಂದು ತೆಂಕನಿಡಿಯೂರು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಕೆ. ವೆಂಕಟೇಶ್ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಕನ್ನಡ ವಿಭಾಗಗಳ ಆಶ್ರಯದಲ್ಲಿ ನಡೆದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ದಿನದ ನಿಮಿತ್ತ ಆಯೋಜಿಸಲಾದ ಅವರ ನೆನಪಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸ್ನಾತಕೋತ್ತರ ಅ್ಯಯನಕೇಂದ್ರಹಾಗೂಕನ್ನಡವಿಾಗಗಳ ಆಶ್ರಯದಲ್ಲಿ ನಡೆದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ದಿನದ ನಿಮಿತ್ತ ಆಯೋಜಿಸಲಾದ ಅವರ ನೆನಪಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು. ಗ್ರಾಮೀಣ ಬದುಕಿನ ಜೀವನ ಶೈಲಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸ ಬಲ್ಲ ಕನ್ನಡದ ವಿಶಿಷ್ಟ ಸಾಹಿತಿ ತೇಜಸ್ವಿಯಾಗಿದ್ದರು ಎಂದು ವಿವರಿಸಿದ ವೆಂಕಟೇಶ್, ತೇಜಸ್ವಿಯವರ ‘ಸಂತೆ’ ಹಾಗೂ ‘ಕೃಷ್ಣೇಗೌಡನ ಆನೆ’ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ ಸಿದ್ಧಾಪುರ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಶಿವಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News