ರೆಡ್‌ಕ್ರಾಸ್ ಉಡುಪಿ ಘಟಕದ ವಾರ್ಷಿಕ ಮಹಾಸಭೆ
ಉಡುಪಿ, ಸೆ.19: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಅಜ್ಜರಕಾಡಿನಲ್ಲಿರುವ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ಸಂಸ್ಥೆಯ ಸಭಾಪತಿ ಡಾ. ಉಮೇಶ್ ಪ್ರಭು ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ಸಿ.ಜನಾರ್ದನ್ ಅವರು 2016-17ನೇ ಸಾಲಿನ ಆಡಳಿತಾತ್ಮಕ ವರದಿ ಹಾಗೂ ಖಜಾಂಚಿ ಡಾ. ರಾಮಚಂದ್ರ ಕಾಮತ್ ಲೆಕ್ಕಪತ್ರಗಳು ಹಾಗೂ ಲೆಕ್ಕ ಪರಿಶೋಧನಾ ವರದಿ ಮತ್ತು 2017-18ನೇ ಸಾಲಿನ ಬಜೆಟ್ ಮಂಡಿಸಿ ಅನುಮೋದಿಸಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯಶಾಖೆ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ಜಿಲ್ಲಾ ಘಟಕ ನಡೆದು ಬಂದ ಹಾದಿ, ವಿಪತ್ತು ನಿರ್ವಹಣೆ, ಯುವ ರೆಡ್‌ಕ್ರಾಸ್ ಘಟಕಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೊಸದಿಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಆಡಳಿತ ಸಮಿತಿ ಸದಸ್ಯರಾದ ಅವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಮಹಾಸಭೆಯಲ್ಲಿ ಪೋಷಕ ಸದಸ್ಯರಾದ ಶಶಿಧರ ಶೆಟ್ಟಿ, ಡಾ.ಉಮೇಶ್ ಪ್ರಭು, ಸಿ.ಎಸ್.ರಾವ್ ಹಾಗೂ ಉಪಪೋಷಕ ಸದಸ್ಯತ್ವ ವನ್ನು ಹೊಂದಿದ ಡಾ. ಶಶಿ ಜೋಯಿಸ್ಸ್ ಸೋನ್ಸ್ ಮತ್ತು ಭಾಸ್ಕರ ಪಾಲನ್‌ಗೆ ರಾಷ್ಟ್ರಪತಿಗಳಿಂದ ಸಹಿ ಮಾಡಿದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ರೆಡ್‌ಕ್ರಾಸ್‌ನ ಪ್ರಥಮ ಸದಸ್ಯ ಡಾ. ಕೆ.ಕೆ. ಕಲೂ್ಕರರನ್ನು ಸಹ ಅಭಿನಂದಿಸಲಾಯಿತು. ಖಜಾಂಚಿ ಡಾ. ರಾಮಚಂದ್ರ ಕಾಮತ್ ವಂದಿಸಿ,ಜಯರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.