ಮಾವೋವಾದಿಗಳಿಂದ ಸೋಲಾರ್ ವಿದ್ಯುತ್ ಘಟಕ ಸ್ಫೋಟ
Update: 2017-09-19 21:48 IST
ಗಯಾ, ಸೆ. 19: ಬಿಹಾರದ ಗಯಾ ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ ಘಟಕವನ್ನು ಮಾವೋವಾದಿಗಳು ಸ್ಫೋಟಿಸಿದ್ದಾರೆ. ಇದರಿಂದ ಅದರ ನಿಯಂತ್ರಣ ಕೊಠಡಿ ಹಾಗೂ ವಾಸ್ತವ್ಯ ಘಟಕಕ್ಕೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದಾ ನೀಡದೇ ಇರುವುದಕ್ಕೆ ಕೆರಳಿದ ಮಾವೋವಾದಿಗಳು ಸುಧಾರಿತ ಸ್ಫೋಟಕ ಬಳಸಿ ಟಾಟಾ ಪವರ್ ಮಾಲಕತ್ವದ ಸೋಲಾರ್ ವಿದ್ಯುತ್ ಘಟಕವನ್ನು ಮಂಗಳವಾರ ರಾತ್ರಿ ಸ್ಫೋಟಿಸಿದರು ಎಂದು ಉಪ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ.