“ಮರಳಿನಲ್ಲಿ ತಲೆಗಳನ್ನು ಅಡಗಿಸುವ ಯತ್ನ”

Update: 2017-09-19 17:18 GMT

ಬ್ಯಾಂಕಾಕ್, ಸೆ. 19: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಆ ದೇಶದ ನಾಯಕಿ ಆಂಗ್ ಸಾನ್ ಸೂ ಕಿ ಮತ್ತು ಅವರ ಸರಕಾರ ‘ತಮ್ಮ ತಲೆಗಳನ್ನು ಮರಳಿನಲ್ಲಿ ಅಡಗಿಸುವ ಯತ್ನಗಳನ್ನು ಮಾಡುತ್ತಿವೆ’ ಎಂದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ‘ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್’ ಮಂಗಳವಾರ ಆರೋಪಿಸಿದೆ.

ತನ್ನ ಟೆಲಿವಿಶನ್ ಭಾಷಣದಲ್ಲಿ ಸೂ ಕಿ, ರೊಹಿಂಗ್ಯಾಗಳ ವಿರುದ್ಧ ಹಿಂಸಾಚಾರದಲ್ಲಿ ತೊಡಗಿರುವ ಸೇನೆಯನ್ನು ಖಂಡಿಸುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ಅದು ಬೆಟ್ಟು ಮಾಡಿದೆ.

  ‘‘ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯಾಗಳು ಮ್ಯಾನ್ಮಾರ್‌ನಲ್ಲಿ ನೆಲೆಸಿರುವ ಈ ಮಾದರಿಯ ಆತಂಕಕಾರಿ ಪರಿಸ್ಥಿತಿಯಲ್ಲಿ ಮರಳಲು ಸಾಧ್ಯವಿಲ್ಲ’’ ಎಂದು ಅದು ಹೇಳಿದೆ. ‘‘ಅವರ ಭಾಷಣ ಅಸತ್ಯಗಳು ಮತ್ತು ಸಂತ್ರಸ್ತರನ್ನೇ ದೂಷಿಸುವ ಮಿಶ್ರಣವಾಗಿ ಕಂಡಿದೆ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News