×
Ad

ಸೆ. 20: ಗೃಹ ಸಚಿವರು ಮಂಗಳೂರಿಗೆ

Update: 2017-09-19 22:54 IST

ಮಂಗಳೂರು, ಸೆ. 19: ಗೃಹ ಸಚಿವ ರಾಮಲಿಂಗಾರೆಡ್ಡಿ ಸೆ. 20ರಂದು ಮಂಗಳೂರಿಗೆ ಬೇಟಿ ನೀಡಲಿದ್ದು, ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಳಗ್ಗೆ 8:10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಚಿವರು ಅಲ್ಲಿಂದ ಮೂಡಬಿದ್ರೆಗೆ ತೆರಳಲಿದ್ದಾರೆ. 9 ಗಂಟೆಗೆ ಮೂಡಬಿದ್ರೆ ಅಗ್ನಿಶಾಮಕ ಠಾಣೆ ಉದ್ಘಾಟಿಸಿ, 10 ಗಂಟೆಗೆ ಮಂಗಳೂರು ನಗರ ದಕ್ಷಿಣ ಸಂಚಾರಿ ಠಾಣೆ ಉದ್ಘಾಟಿಸಲಿದ್ದಾರೆ. 11 ಗಂಟೆಯಿಂದ ಮಂಗಳೂರು ನಗರ ಕಮಿಷನರೇಟ್ ಮತ್ತು ಪಶ್ಚಿಮ ವಲಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದ ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News