ಆತ್ಮಹತ್ಯೆ
Update: 2017-09-19 23:02 IST
ಬ್ರಹ್ಮಾವರ, ಸೆ.19: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಚಾಂತಾರು ಗ್ರಾಮದ ಮಠದ ಬೆಟ್ಟು ಎಂಬಲ್ಲಿರುವ ಹಾಡಿಯಲ್ಲಿ ಸೆ.18ರಂದು ಸಂಜೆ ವೇಳೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರನ್ನು ನೀಲಾವರ ಗ್ರಾಮದ ದೇವಾಡಿಗರ ಬೆಟ್ಟು ನಿವಾಸಿ ಸುಂದರ ದೇವಾಡಿಗ(75) ಎಂದು ಗುರುತಿಸಲಾಗಿದೆ. ಇವರು ಸೆ.3ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಇವರು ವೈಯಕ್ತಿಕ ಕಾರಣದಿಂದ ಜೀವನ ದಲ್ಲಿ ಜಿಗುಪ್ಸೆಗೊಂಡು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ರುವುದಾಗಿ ಮನೆಯವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.