ಸೆ .21 ಆಳ್ವಾಸ್ ಎಂಬಿಎ 2017-19 ಬ್ಯಾಚ್ ಉದ್ಘಾಟನೆ

Update: 2017-09-19 17:46 GMT

ಮೂಡುಬಿದಿರೆ, ಸೆ. 19: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ 2017-19 ಬ್ಯಾಚ್ ಉದ್ಘಾಟನೆ ಸೆ. 21ರಂದು ಕಾಲೇಜಿನ ಎಂಬಿಎ ಸೆಮಿನಾರ್ ಹಾಲ್‌ನಲ್ಲಿ ನಡೆಯಲಿದೆ.

ಜಿಯೋ ನ್ಯಾಚುರಲ್ ಪ್ರೈ. ಲಿ., ಬೆಂಗಳೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಸ್ ದಾಮೋದರನ್ ಬ್ಯಾಚ್ ಉದ್ಘಾಟಿಸಲಿದ್ದಾರೆ. ಸಿಲಿಕಾನ್ ಇಂಡಿಯಾದ ಹಿರಿಯ ಮ್ಯಾನೇಜರ್, ಕಾಲೇಜಿನ ಹಳೇ ವಿದ್ಯಾರ್ಥಿ ಪ್ರಶೀಲ್ ಶೆಟ್ಟಿ ಭಾಗವಹಿಸಲಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಲಿದ್ದು ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ , ವಿವಿಧ ವಿಭಾಗಗಳ ಮುಖ್ಯಸ್ಥರು, ಎಂಬಿಎ ಉಪನ್ಯಾಸಕರು , ಎಂಬಿಎ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಲಿದ್ದಾರೆ ಎಂದು ಎಂಬಿಎ ವಿಭಾಗದ ಡೀನ್ ಪ್ರೊ ಪಿ ರಾಮಕೃಷ್ಣ ಚಡಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News