ಮ್ಯಾನ್ಮಾರ್‌ಗೆ ಬೆಂಬಲ ನೀಡಿದ ಚೀನಾ

Update: 2017-09-19 17:49 GMT

ಬೀಜಿಂಗ್, ಸೆ. 19: ತನ್ನ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಮ್ಯಾನ್ಮಾರ್ ಸರಕಾರದ ಪ್ರಯತ್ನಗಳನ್ನು ಚೀನಾ ಬೆಂಬಲಿಸುತ್ತದೆ ಹಾಗೂ ಆ ದೇಶದ ರಖೈನ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ದಾಳಿಗಳನ್ನು ಖಂಡಿಸುತ್ತದೆ ಎಂದು ಚೀನಾದ ವಿದೇಶ ಸಚಿವ ವಾಂಗ್ ಯಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್‌ಗೆ ಹೇಳಿದ್ದಾರೆ.

ಬಾಂಗ್ಲಾದೇಶಕ್ಕೆ ಪಲಾಯನಗೈದಿರುವವರ ಬಗ್ಗೆ ಚೀನಾಕ್ಕೆ ಸಹಾನುಭೂತಿಯಿದೆ ಹಾಗೂ ಬಾಂಗ್ಲಾದೇಶಕ್ಕೆ ಮಾನವೀಯ ನೆರವನ್ನು ಕಳುಹಿಸಲಾಗುವುದು ಎಂದೂ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News