ಉಬರ್ ವಿರುದ್ಧ ದೂರು: ಅಧಿಕಾರಿಗಳೊಂದಿಗೆ ಸಂಸದ ಚರ್ಚೆ

Update: 2017-09-19 17:56 GMT

ಮಂಗಳೂರು, ಸೆ.19: ಉಬರ್ ಕ್ಯಾಬ್ ಚಾಲಕರ ವಿರುದ್ಧ ಅಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ನೀಡಿದ ದೂರಿನ ಮೇರೆಗೆ ಸಂಸದ ನಳಿನ್‌ಕುಮಾರ್ ಕಟೀಲು ಮಂಗಳವಾರ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಬರ್ ಕ್ಯಾಬ್ ಚಾಲಕರು ಬಾಡಿಗೆಗೆ ತನ್ನ ವಾಹನ ಓಡಿಸುವುದರಿಂದ ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಚರ್ಚಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ರೈಲ್ವೆ ಮತ್ತು ಪೊಲೀಸ್ ಇಲಾಖೆಯ ಜೊತೆ ಸೆ.28ರಂದು ಸಭೆ ನಡೆಸುವುದಾಗಿ ತಿಳಿಸಿದರು.

ಉಬರ್ ಕ್ಯಾಬ್‌ನವರಿಗೆಂದೇ ರೈಲ್ವೆ ಇಲಾಖೆ ನಿಲ್ದಾಣದ ಅನತಿ ದೂರದಲ್ಲಿ ತಾತ್ಕಾಲಿಕವಾಗಿ ಪ್ರತ್ಯೇಕ ಪಾರ್ಕಿಂಗ್‌ನ್ನು ನೀಡಿದೆ. ಅದನ್ನು ಅವರು ಸರಿಯಾಗಿ ಬಳಸಿಕೊಳ್ಳಬೇಕೇ ಹೊರತು ಇತರರಿಗೆ ತೊಂದರೆ ಕೊಡಬಾರದು. ಆದಾಗ್ಯೂ ಉಬರ್ ಕ್ಯಾಬ್‌ನವರು ಕಡಿಮೆ ಬಾಡಿಗೆ ಪಡೆದು ಸೇವೆ ನೀಡುತ್ತಿರುವುದು ಸಾರ್ವಜನಿಕರಿಗೆ ಅನುಕೂಲವಾಗುತ್ತಿರುವುದರಿಂದ ಉಬರ್ ಕ್ಯಾಬ್ ನಿಲ್ದಾಣ ಪ್ರವೇಶಿಸುವುದುನ್ನು ನಿಷೇಧಿಸುವುದು ಸಾಧ್ಯವಾಗುವುದಿಲ್ಲ ಎಂದು ಸಂಸದ ನಳಿನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News