ಮಂಗನನ್ನು ಕೊಂದು ನುಂಗಲು ಯತ್ನಿಸಿದ ಹೆಬ್ಬಾವು!
Update: 2017-09-20 18:38 IST
ಉಡುಪಿ, ಸೆ.20: ಹೆಬ್ಬಾವೊಂದು ಮಂಗನನ್ನು ಕೊಂದು ನುಂಗಲು ಯತ್ನಿಸಿದ ಅಪರೂಪದ ಘಟನೆ ಕಾರ್ಕಳ ತಾಲೂಕಿನ ಮಾಳ ಎಂಬಲ್ಲಿ ಇಂದು ನಡೆದಿದೆ.
ಈ ದೃಶ್ಯ ಮಾಳದ ನಿರಂಜನ್ ಎಂಬವರ ತೋಟದಲ್ಲಿ ಕಂಡು ಬಂದಿದ್ದು, ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಹಸಿದ ಹೆಬ್ಬಾವು ನಾಯಿ, ಕೋಳಿಯನ್ನು ತಿನ್ನುವುದು ಸಾಮಾನ್ಯ. ಆದರೆ ಇಲ್ಲಿ ಹೆಬ್ಬಾವು ಹೊಟ್ಟೆ ತುಂಬಿಸಿಕೊಳ್ಳಲು ಮಂಗನನ್ನೇ ಸಾಯಿಸಿದೆ.
ಬಳಿಕ ಸತ್ತ ಮಂಗನನ್ನು ಸುತ್ತಿಕೊಂಡ ಹೆಬ್ಬಾವು ಅದನ್ನು ನುಂಗಲು ಪ್ರಯತ್ನಿಸಿದೆ. ದೊಡ್ಡ ಗಾತ್ರದ ಮಂಗನನ್ನು ನುಂಗಲು ಹಾವಿಗೆ ಸಾಧ್ಯವಾಗಿರಲಿಲ್ಲ. ಮಂಗನನ್ನು ತಿನ್ನಲು ಉರುಳಾಡಿ ಸುಸ್ತಾದ ಹೆಬ್ಬಾವು ಬಳಿಕ ಮಂಗನನ್ನು ಬಿಟ್ಟು ಪೊದೆ ಸೇರಿಕೊಂಡಿದೆ.