×
Ad

ಕಡಿಮೆ ತ್ಯಾಜ್ಯ ಉತ್ಪಾದನೆ, ಕಸ ನಿರ್ವಹಣೆ ಇಂದಿನ ಅಗತ್ಯ: ಜಿಲ್ಲಾಧಿಕಾರಿ

Update: 2017-09-20 19:03 IST

ಉಡುಪಿ, ಸೆ.20: ಸುಸ್ಥಿರ ಜೀವನ, ಕಡಿಮೆ ತ್ಯಾಜ್ಯ ಉತ್ಪಾದನೆ ಹಾಗೂ ತ್ಯಾಜ್ಯದ ಸಮರ್ಪಕ ನಿರ್ವಹಣೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಉಡುಪಿ ರೋಟರಿ ಕ್ಲಬ್ ವತಿಯಿಂದ ರೋಟರಿ ವಲಯ ಸಂಯೋಜಕ ಬಿ.ವಿ.ಲಕ್ಷ್ಮೀನಾರಾಯಣ ಅವರ ಉಡುಪಿ ಲಕ್ಷ್ಮೀಂದ್ರನಗರದ ಮನೆಯಲ್ಲಿ ಅಳವಡಿಸಲಾದ ಪೈಪ್ ಕಂಪೋಸ್ಟ್ ವ್ಯವಸ್ಥೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತ್ಯಾಜ್ಯದ ಉತ್ಪಾದನೆ ಕಡಿಮೆಗೊಳಿಸುವುದರ ಜೊತೆಗೆ ಉತ್ಪತ್ತಿಯಾಗು ವಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಪ್ರತಿಯೊಬ್ಬರ ಮುಖ್ಯ ಕರ್ತವ್ಯವಾಗಿದೆ. ಮರುಬಳಕೆ ಮಾಡುವಂತಹ ವಸ್ತುಗಳನ್ನು ಹೆಚ್ಚು ಉಪಯೋಗಿಸುವ ಮೂಲಕ ಕಸ ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಉಡುಪಿಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಯೋಜನೆಯ ಜೊತೆ ಎಲ್ಲರೂ ಕೈಜೋಡಿಸಬೇಕು ಎಂದರು.

ಶಿವಮೊಗ್ಗದಲ್ಲಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಜಾರಿಗೆ ತರಲಾಗಿ ರುವ ನೂತನ ಯೋಜನೆಯು ಯಶಸ್ವಿಯಾಗಿದ್ದು, ಇದನ್ನು ಉಡುಪಿ ನಗರಸಭೆ ಯಲ್ಲಿಯೂ ಅಳವಡಿಸುವ ನಿಟ್ಟಿನಲ್ಲಿ ನಗರಸಭೆಯ ಪರಿಸರ ಇಂಜಿನಿಯರ್ ಅವರನ್ನು ಅಧ್ಯಯನಕ್ಕಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗುತ್ತದೆ ಎಂದು ಅವರು ತಿಳಿಸಿದರು.

ರೋಟರಿಯ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್ ಮಾತನಾಡಿದರು. ರೋಟರಿ ವಲಯ ಸಹಾಯಕ ಗವರ್ನರ್ ಬಾಲಕೃಷ್ಣ ಮದ್ದೋಡಿ, ಉಡುಪಿ ರೋಟರಿ ಅಧ್ಯಕ್ಷ ರಾಮಚಂದ್ರ ಉಪಾಧ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಕಾರಂತ್, ವಲಯ ಸಂಯೋಜಕ ಬಿ.ವಿ.ಲಕ್ಷ್ಮೀನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News