×
Ad

ಎಒಆರ್‌ಗಳು ಮಾತ್ರ ಪ್ರಕರಣಗಳ ತುರ್ತು ವಿಚಾರಣೆಯನ್ನು ಕೋರಬಹುದು: ಸುಪ್ರೀಂ

Update: 2017-09-20 19:10 IST

ಹೊಸದಿಲ್ಲಿ,,ಸೆ.20: ಸರದಿಯನ್ನು ತಪ್ಪಿಸಿ ಪ್ರಕರಣಗಳ ತುರ್ತು ವಿಚಾರಣೆಗೆ ಕೋರಲು ಹಿರಿಯ ವಕೀಲರಿಗೆ ಅವಕಾಶ ನೀಡುವ ಹಳೆಯ ಪದ್ಧತಿಗೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಅಂತ್ಯ ಹಾಡಿದೆ. ಇನ್ನು ಮುಂದೆ ಅಡ್ವೋಕೇಟ್ಸ್ ಆನ ರೆಕಾರ್ಡ್(ಎಒಆರ್) ಅಥವಾ ಸಂವಿಧಾನದ 145ನೇ ವಿಧಿಯಡಿ ರೂಪಿತ ಸರ್ವೋಚ್ಚ ನ್ಯಾಯಾಲಯದ ನಿಯಮಾವಳಿಯಂತೆ ದಾಖಲೆಯಲ್ಲಿರುವ ವಕೀಲರು ಮಾತ್ರ ಪ್ರಕರಣದ ತುರ್ತು ವಿಚಾರಣೆಯನ್ನು ಕೋರುವ ಹಕ್ಕು ಹೊಂದಿರುತ್ತಾರೆ ಎಂದು ಮುಖ್ಯ ನ್ಯಾಯಾಧೀಶ ದೀಪಕ ಮಿಶ್ರಾ ನೇತೃತ್ವದ ಪೀಠವು ಸ್ಪಷ್ಟಪಡಿಸಿದೆ.

ಹಿರಿಯ ವಕೀಲರಿಗೆ ಪ್ರಕರಣಗಳ ತುರ್ತು ವಿಚಾರಣೆಗೆ ಕೋರಲು ಅವಕಾಶವಿದೆ, ಆದರೆ ಕಿರಿಯ ವಕೀಲರಿಗೆ ಈ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ವಕೀಲ ರೋರ್ವರು ಮಂಗಳವಾರ ದೂರಿಕೊಂಡ ಬಳಿಕ ಈ ಬಗ್ಗೆ ಪೀಠವು ಅಸಮಾಧಾನವನ್ನು ವ್ಯಕ್ತಪಡಿಸಿತ್ತು.

ತುರ್ತು ವಿಚಾರಣೆಗೆ ಪ್ರಕರಣಗಳನ್ನು ಉಲ್ಲೇಖಿಸಲು ಕೆಲವು ವಕೀಲರಿಗೆ ಅನುಮತಿ ನಿರಾಕರಣೆಯ ಬಳಿಕ ಕೋಲಾಹಲಕ್ಕೂ ನ್ಯಾಯಾಲಯವು ಸಾಕ್ಷಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News