×
Ad

ಬಂದ್ಯೋಡು ಪಚ್ಚಂಬಳ ಕಳವು ಪ್ರಕರಣ ; ಇನ್ನೋರ್ವ ಆರೋಪಿಯ ಬಂಧನ

Update: 2017-09-20 19:20 IST

ಮಂಜೇಶ್ವರ,ಸೆ.20 : ಬಂದ್ಯೋಡು ಸಮೀಪದ ಪಚ್ಚಂಬಳ ಎಂಬಲ್ಲಿ ಮನೆಯೊಂದರಿಂದ ಕಳವುಗೈದ ಪ್ರಕರಣದಲ್ಲಿ ಇನ್ನೋರ್ವ ಮುಖ್ಯ ಆರೋಪಿಯನ್ನು ಕುಂಬಳೆ ಪೋಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಪ್ಪಳ ಹೀರೋ ಗಲ್ಲಿ ಯ ಹೊಸಂಗಡಿಯ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ವಾಸವಿರುವ ಜಂಶೀದ್(24) ಎಂದು ಗುರಿತಿಸಲಾಗಿದೆ.

ಕಳೆದ ವರ್ಷ ಜೂನ್ ನಲ್ಲಿ ಪಚ್ಚಂಬಳದ ಮುಹಮ್ಮದ್ ಅಶ್ರಫ್ ಎಂಬವರ ಮನೆಯ ಬಾಗಿಲು ಮುರಿದು ಒಳನುಗ್ಗಿ 15 ಪವನ್ ಚಿನ್ನಾಭರಣ ಹಾಗೂ 13000 ರೂ. ಕಳವು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಈತನನ್ನು ಕುಂಬಳೆ ಎಸ್.ಐ ಜಯಶಂಕರ್ , ಎ.ಎಸ್.ಐ ಟಿ.ಪಿ ಶಿವದಾಸನ್ ನೇತೃತ್ವದ ಪೋಲೀಸ್ ತಂಡ ಬಂಧಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News