ಉಳ್ಳಾಲ: ಯುನೈಟೆಡ್ ಸೋಶಿಯಲ್‍ನಿಂದ ವಿಚಾರಗೋಷ್ಠಿ
ಉಳ್ಳಾಲ,ಸೆ.20 :ರೋಹಿಂಗ್ಯ ಎನ್ನುವುದು ಒಂದು ಜನಾಂಗವಾಗಿದ್ದು, ಎಲ್ಲರೂ ಒಂದೇ ಧರ್ಮಕ್ಕೆ ಸೀಮಿತರಾದವರಲ್ಲ. ಐದು ಶತಮಾನಗಳ ಹಿಂದೆ ಬರ್ಮಾದ ರಾಕಿನ್ ರಾಜ್ಯದಲ್ಲಿ ಇವರು ಬದುಕಿದ ಪುರಾವೆಯಿದ್ದು ಜನಾಂಗದಲ್ಲಿ ರಾಜರುಗಳಿದ್ದರು. ಇವರು ಭಾರತೀಯ ಹಲವು ರಾಜರುಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನೂ ಹೊಂದಿದ್ದರು ಎಂದು ಹೋಪ್ ಇಂಡಿಯಾ ಸಂಘಟನೆಯ ಅಧ್ಯಕ್ಷ ಸೈಫ್ ಸುಲ್ತಾನ್ ತಿಳಿಸಿದರು.
ಉಳ್ಳಾಲದ ಯುನೈಟೆಡ್ ಸೋಶಿಯಲ್ ಮೂಮೆಂಟ್ ವತಿಯಿಂದ ಸಂಘಟನೆಯ ಕಚೇರಿಯಲ್ಲಿ ರವಿವಾರ ನಡೆದ `ರೋಂಹಿಗ್ಯ ಮುಸ್ಲಿಮರು' ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.
ಹಿಂದೂ, ಮುಸ್ಲಿಂ, ಕ್ರೈಸ್ತರನ್ನು ಒಳಗೊಂಡಿರುವ ರೋಹಿಂಗ್ಯ ಜನಾಂಗ ಚಿತ್ರಹಿಂಸೆಯಿಂದ ಕಂಗೆಟ್ಟು ವಲಸೆ ಹೋಗುತ್ತಿದ್ದು ಶ್ರೀಲಂಕಾ, ಟಿಬೆಟಿಯನ್ ಸಹಿತ ಕೆಲವು ದೇಶಗಳು ಭೂಮಿ, ಬದುಕುವ ಹಕ್ಕು ನೀಡಿ ಮಾನವೀಯ ಮೌಲ್ಯ ಎತ್ತಿಹಿಡಿದಿದೆ. ಭಾರತೀಯ ಆಡಳಿತ ವ್ಯವಸ್ಥೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲು ಹೃದಯವಂತ ಭಾರತೀಯರು ಜಾಗೃತಿ ಆಂದೋಲನ ನಡೆಸುತ್ತಿರುವುದು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಚಾಟೆಂಡ್ ಎಕೌಂಟೆಂಟ್, ಯು.ಎಚ್.ಅಹ್ಮದ್, ಬಿ.ಎಂ.ಬದ್ರುದ್ದೀನ್, ಸಿದ್ದೀಕ್ ಅಬ್ಬಾಸ್, ಹೈದರ್ ಉಳ್ಳಾಲಬೈಲ್, ಬಶೀರ್ ಗುಂಡಿಹಿತ್ಲು, ಕೆ.ಎಸ್.ಮೊಯ್ದೀನ್, ಅಶ್ರಫ್ ಮೇಲಂಗಡಿ, ಅಝೀಝ್ ಬಾವ, ರಹೀಂ ಮುಟ್ಟಿಕ್ಕಲ್, ಅಬ್ದುಲ್ಲಾ, ಶಮೀರ್ ರಹ್ಮಾನ್ ಮೊದಲಾದವರು ಉಪಸ್ಥಿತರಿದ್ದರು.
ಯುನೈಟೆಡ್ ಸೋಶಿಯಲ್ ಮೂಮೆಂಟ್ ಸಂಚಾಲಕ ಫಾರೂಕ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಹ್ಮದ್ ಬಾವ ಕೊಟ್ಟಾರ ವಂದಿಸಿದರು.