×
Ad

ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನದ ಮೂಲಕ ಮುನ್ನಡೆಯಬೇಕು: ರಾಷ್ಟ್ರೀಯ ಫುಟ್ಬಾಲ್ ಆಟಗಾರ ಮುಹಮ್ಮದ್ ರಫಿ

Update: 2017-09-20 19:53 IST

ಕೊಣಾಜೆ,ಸೆ.20: ಕೊಣಾಜೆ  ನಡುಪದವಿನಲ್ಲಿರುವ ಪಿ.ಎ  ಇಂಜಿನಿಯರಿಂಗ್ ಕಾಲೇಜಿನಲ್ಲಿ  ನಡೆಯುವ ಆರನೇ ಆವೃತ್ತಿಯ  ` ಪಿ ಎ ಪ್ರೀಮಿಯರ್ ಲೀಗ್ -2017  ಫುಟ್ಬಾಲ್  ಪಂದ್ಯಾಟಕ್ಕೆ ರಾಷ್ಟ್ರೀಯ ಫುಟ್ಬಾಲ್ ಆಟಗಾರ  ಮುಹಮ್ಮದ್ ರಫಿ ಅವರು ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು,  ಫುಟ್ಬಾಲ್ ಲೀಗ್ ನ ಆಯೋಜನೆಯಿಂದ  ಸ್ಥಳೀಯ ಮಟ್ಟದಲ್ಲಿ ಹಲವು  ಉತ್ತಮ ಆಟಗಾರರು ಬೆಳೆಯಲು ಸಾಧ್ಯ, ಇಂತಹ ಲೀಗ್ ಆಯೋಜಕರ ಕಾರ್ಯ ಶ್ಲಾಘನೀಯ ಮತ್ತು ಆಟದಲ್ಲಿ ತೊಡಗಿಸುವವರು ಉತ್ತಮವಾಗಿ ಶಕ್ತಿಪ್ರದರ್ಶನವನ್ನು ಪ್ರದರ್ಶಿಸಿ ಮುನ್ನಡೆಯಬೇಕಿದೆ ಎಂದು ಹೇಳಿದರು.  

ಸಹತಂಡಗಳು ಮತ್ತು ತಂಡಗಳ ಒಳಗೆ ಉತ್ತಮ ಸಂಬಂಧವನ್ನು  ನಿರ್ವಹಿಸುವ ಮೂಲಕ ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಕರ ಪಂದ್ಯಾಟ ನಡೆಯಲು ಸಾಧ್ಯ. ಇದರಿಂದ ಆಯೋಜಕರ ಉದ್ದೇಶವೂ ಪೂರ್ಣವಾಗುವುದು ಎಂದರು.

ಈ ಸಂದರ್ಭ ಪಿ.ಎ ಕಾಲೇಜಿನ ಆಡಳಿತ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂ, ನಿರ್ದೇಶಕ ಕೆ.ಎಂ.ಹನೀಫ್,  ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್,  ಉಪಪ್ರಾಂಶುಪಾಲ  ಡಾ.ಕೆ.ಎಂ ರಮೀಝ್, ಅಕಾಡೆಮಿಕ್ಸ್ ನಿರ್ದೇಶಕ  ಸಫ್ರಾಝ್ ಹಾಸಿಂ.ಜೆ, ಕ್ರೀಡಾ ನಿರ್ದೇಶಕ  ಇಕ್ಬಾಲ್,  ಕಾಸರಗೋಡು ಜಿಲ್ಲಾ ಫುಟ್ಬಾಲ್  ಅಸೋಸಿಯೇಷನ್ನಿನ  ಅಧ್ಯಕ್ಷ ಪಿ.ಸಿ. ಆಸಿಫ್,  ಶರ್ಫುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. 
 ಪಿ ಎ ಪ್ರೀಮಿಯರ್ ಲೀಗ್ -2017 ರಲ್ಲಿ 10 ತಂಡಗಳು ಭಾಗವಹಿಸಲಿವೆ. 

ಕಾಸರಗೋಡು ತ್ರಿಕರಿಪುರ್ ಜಿಲ್ಲೆಯವರಾದ ಮುಹಮ್ಮದ್ ರಫಿ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರರಾಗಿದ್ದಾರೆ.  ಹಿಂದೆ ಸೌರವ್ ಗಂಗೂಲಿ ಮಾಲೀಕತ್ವದ ಅಥ್ಲೆಟಿಕೊ ಡೆ ಕೊಲ್ಕತ್ತಾ ತಂಡದಲ್ಲಿ ಸ್ಟಾರ್ ಆಟಗಾರನಾಗಿ ಮಿಂಚಿದ್ದ ರಫಿ ಬಳಿಕ  ಸಚಿನ್ ತೆಂಡುಲ್ಕರ್ ಒಡೆತನದ ಕೇರಳ  ಬ್ಲಾಸ್ಟರ್ ತಂಡದಲ್ಲಿ ಆಟಗಾರರಾಗಿದ್ದರು. ಪ್ರಸ್ತುತ  ಮಹೇಂದ್ರ ಸಿಂಗ್ ಧೋನಿ ಯ  ಚೆನ್ನಯನ್ ಎಫ್ ಸಿ  ರಾಷ್ಟ್ರಮಟ್ಟದ ಫುಟ್ ಬಾಲ್ ತಂಡದಲ್ಲಿ ಪ್ರತಿನಿಧಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News