ಉಡುಪಿ : ವ್ಯಕ್ತಿ ನಾಪತ್ತೆ
Update: 2017-09-20 20:15 IST
ಉಡುಪಿ, ಸೆ.20:ಉಡುಪಿ ವಳಕಾಡು ನಾರಾಯಣ ರಾವ್ ಕಂಪೌಂಡ್‌ನಲ್ಲಿ ವಾಸವಿರುವ ಚಿತ್ತುಮಾಲಿ ಎಂಬವರ ಅಣ್ಣ ಚಾ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಸುಮಾರು 40 ವರ್ಷ ಪ್ರಾಯದ ಜೋರಾರಾಮ್ ಎಂಬವರು ಸೆ.19ರಂದು ಬೆಳಗ್ಗೆ 8:30ಕ್ಕೆ ಚಾ ಮಾರಾಟ ಮಾಡಲು ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಸಾಧಾರಣ ಮೈಕಟ್ಟು ಹೊಂದಿರುವ, ಹಿಂದಿ, ಕನ್ನಡ, ರಾಜಸ್ತಾನಿ ಭಾಷೆ ಬಲ್ಲ, ಬಲಕೈಯಲ್ಲಿ ಜೋರಾರಾಮ್ ಎಂದು ಹಿಂದಿಯಲ್ಲಿ ಬರೆದಿರುವ ಹಚ್ಛೆ ಇರುವ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪಕಿಸುವಂತೆ ಪ್ರಕಟಣೆ ತಿಳಿಸಿದೆ.