ಕೈಗಾರಿಕಾ ಸ್ಪಂದನ ಕಾರ್ಯಕ್ರಮ
ಉಡುಪಿ, ಸೆ.20: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೈಗಾರಿಕೋದ್ಯಮಿ ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು 2010ರಿಂದ ಕೈಗಾರಿಕಾ ಅದಾಲತ್ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ.
ಕೈಗಾರಿಕೆಗಳ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ/ ಕೆಎಸ್‌ಎಸ್‌ಐಡಿಸಿ, ಎಸ್ಕಾಂ, ಕೆಎಸ್‌ಪಿಸಿಬಿ ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲುಗಳು/ಕುಂದುಕೊರತೆಗಳಿಗೆ ಪರಿಹಾರ ಪಡೆಯಲು ಕೈಗಾರಿಕಾ ಅದಾಲತ್ ಕಾರ್ಯಕ್ರಮವನ್ನು ಕೈಗಾರಿಕಾ ಸ್ಪಂದನ ಎಂದು 2015 ರಲ್ಲಿ ಮರುನಾುಕರಣ ಮಾಡಿ ಸರಕಾರ ಆದೇಶಿಸಿದೆ.
ಅದರಂತೆ ಉಡುಪಿ ಜಿಲ್ಲೆಯಲ್ಲಿ ಅ.10ರಂದು ಬೆಳಗ್ಗೆ 11:30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಗಾರಿಕಾ ಸ್ಪಂದನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಕೈಗಾರಿಕೋದ್ಯಮಿಗಳು ಈ ಕೈಗಾರಿಕಾ ಸ್ಪಂದನಕ್ಕೆ ಸಂಬಂಧಿಸಿ ಅಹವಾಲುಗಳನ್ನು ಅ.5ರೊಳಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ ಈ ಕಚೇರಿಗೆ ಸಲ್ಲಿಸುವಂತೆ ಕೈಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.