ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆ

Update: 2017-09-20 15:41 GMT

ಉಡುಪಿ, ಸೆ.20: ಇಂದ್ರಾಳಿ ರೈಲು ಸೇತುವೆ ಸಮೀಪ ಸೋಮವಾರ ರಾತ್ರಿ ವೇಳೆ ಸುಮಾರು 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ರುಂಡ ಬೆರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

 ವ್ಯಕ್ತಿಯು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರ ಬಹು ದೆಂದು ಶಂಕಿಸಲಾಗಿದೆ. ಮೃತದೇಹವನ್ನು ಮಣಿಪಾಲ ಶವಗಾರದಲ್ಲಿ ಇರಿಸ ಲಾಗಿದೆ. ಮೃತ ವ್ಯಕ್ತಿಯ ತಲೆಕೂದಲು ಗಡ್ಡ ಬಿಳಿಯಾಗಿದ್ದು, ಬಿಳಿ ಪಂಚೆ, ಶರ್ಟ್ ಧರಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News