ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿ: ಆತಂಕಕ್ಕೀಡಾದ ಮುಲ್ಕಿ ಜನತೆ

Update: 2017-09-20 16:23 GMT

ಮುಲ್ಕಿ, ಸೆ.20: ವಾಟ್ಸ್‌ಆ್ಯಪ್‌ನಲ್ಲಿ ಬಂದ ಸುಳ್ಳು ವರದಿಯಿಂದ ಮುಲ್ಕಿ ಜನತೆ ಬುಧವಾರ ಗಾಬರಿಗೊಂಡು ಪರ್ತಕರ್ತರಿಗೆ ಹಾಗೂ ಮುಲ್ಕಿ ಠಾಣೆಗೆ ದೂರವಾಣಿ ಕರೆ ಮಾಡಿ ಸುಸ್ತಾದ ಘಟನೆ ನಡೆದಿದೆ.

ವಾಟ್ಸ್‌ಆ್ಯಪ್‌ನಲ್ಲಿ ಬೆಳಗ್ಗೆಯಿಂದಲೇ ಬ್ರೇಕಿಂಗ್ ನ್ಯೂಸ್ ಹೇಳಿಕೊಂಡು ಮುಲ್ಕಿಯಲ್ಲಿ ಹಿಂಜಾವೇ ಕಾರ್ಯಕರ್ತನ ಕಡಿದು ಬರ್ಬರ ಕೊಲೆ ಎಂದು ಸುದ್ದಿ ಹರಿದಾಡುತ್ತಿದ್ದನ್ನು ಕಂಡು ಕೆಲವರು ಗಾಬರಿಗೊಂಡು ಮುಲ್ಕಿ ಠಾಣೆಗೆ ಫೋನಾಯಿಸಿದ್ದಾರೆ.

ಬಳಿಕ ಮಾಧ್ಯಮದ ಮಂದಿಗೂ ಫೋನಾಯಿಸಿದ್ದು ಸುಳ್ಳು ಎಂದು ತಿಳಿದು ಬಂದು ನಿರಾಳರಾಗಿದ್ದಾರೆ.

ಮುಲ್ಕಿ ಠಾಣಾ ಇನ್‌ಸ್ಪೆಕ್ಟರ್ ಅನಂತಪದ್ಮನಾಭ ಪತ್ರಿಕೆಯೊಂದಿಗೆ ಮಾತನಾಡಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕೆಲ ದುಷ್ಕರ್ಮಿಗಳು ಅನಾಮಿಕ ಸಂದೇಶಗಳನ್ನು ಅಂತರ್ಜಾಲ ತಾಣದಲ್ಲಿ ಹರಿಯಬಿಡುತ್ತಿದ್ದು ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News