ಸಿಯಾಚಿನ್‌ನಲ್ಲಿ ಸ್ವಚ್ಛ ಭಾರತ ಅಭಿಯಾನ

Update: 2017-09-20 16:56 GMT

ಸಿಯಾಚಿನ್, ಸೆ. 20: ಭಾರತೀಯ ಸೇನೆಯ ಯೋಧರು ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್‌ನಲ್ಲಿ ಸ್ಪಚ್ಛ ಭಾರತ ಅಭಿಯಾನ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

 ಭಾರತದಲ್ಲಿರುವ ಸಿಯಾಚಿನ ಸಮುದ್ರ ಮಟ್ಟದಿಂದ ಸರಾಸರಿ 18 ಸಾವಿರ ಅಡಿ ಎತ್ತರದಲ್ಲಿರುವ ಸಮರ ಭೂಮಿ. ಇಲ್ಲಿನ ಪ್ರತಿಕೂಲ ಹವಾಮಾನ ಕೂಡ ಇದನ್ನು ಕಠಿಣ ಯುದ್ಧ ಭೂಮಿಯನ್ನಾಗಿಸಿದೆ. ಯಾವುದೇ ಲೋಹದ ಸಾಧನಗಳನ್ನು 15 ಸೆಕೆಂಡ್‌ಗಳ ಕಾಲ ಸ್ಪರ್ಶಿಸಿದ್ರೆ ಚರ್ಮ ಘಾಸಿಗೊಳ್ಳುವ ಆತಂಕವನ್ನು ಇಲ್ಲಿ ಯೋಧರು ಎದುರಿಸುತ್ತಿದ್ದಾರೆ. ಆದರೆ, ಇದೆಲ್ಲವನ್ನೂ ಮರೆತು ಯೋಧರು ಸಿಯಾಚಿನ್‌ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಸಿಯಾಚಿನ್‌ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೇನೆ ನಿರಂತರ ಈ ಕಾರ್ಯಕ್ರಮ ನಡೆಸಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಸಿಯಾಚಿನ್ ಹಿಮನದಿಯಲ್ಲಿ ಪಾರಿಸರಿಕ ಸಮತೋಲನ ನಿರ್ವಹಿಸುವುದು ಈ ಕಾರ್ಯಕ್ರಮದ ಉದ್ದೇಶ. 2014ರಲ್ಲಿ ಈ ಅಭಿಯಾನ ಆರಂಭಿಸಿದ ಬಳಿಕ ಸಿಯಾಚಿನ್ ತಂಡ 63 ಟನ್ ತ್ಯಾಜ್ಯಗಳನ್ನು ಸಂಗ್ರಹಿಸಿ ಕೆಳಗೆ ಕಳುಹಿಸಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News