ಪ್ರಾಧ್ಯಾಪಕ ಸತೀಶ್‌ಕುಮಾರ್‌ಗೆ ಪಿಎಚ್‌ಡಿ ಪದವಿ
Update: 2017-09-20 22:35 IST
ಮಂಗಳೂರು, ಸೆ. 20: ಮಣಿಪಾಲ ವಿಶ್ವವಿದ್ಯಾಲಯ ವಾಣಿಜ್ಯ ಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕರಾಗಿರುವ ಸತೀಶ್ ಕುಮಾರ್ ಅವರ ‘ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ- ಕರಾವಳಿ ಕರ್ನಾಟಕ ಒಂದು ಅಧ್ಯಯನ’ ಎಂಬ ಪ್ರಬಂಧಕ್ಕೆ ಮಣಿಪಾಲ ವಿವಿ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಮಣಿಪಾಲ ವಿವಿ ಪ್ರೊಫೆಸರ್ ಡಾ.ಎಚ್.ಜಿ.ಜೋಷಿ ಮಾರ್ಗದರ್ಶನದಲ್ಲಿ ಇವರು ಪ್ರಬಂಧ ಸಿದ್ಧಪಡಿಸಿದ್ದರು. ಇವರು ಹೆಜಮಾಡಿ ಕೃಷ್ಣಪ್ಪ -ವಿಶಾಲಾಕ್ಷಿ ದಂಪತಿ ಪುತ್ರ. ಮೂಲ್ಕಿ ಮೆಡಲಿನ್ ಶಾಲೆಯ ಹಳೇ ವಿದ್ಯಾರ್ಥಿ.