×
Ad

ಬಿಜೆಪಿಗೆ ಅನ್ವರ್ ರೀಕೋ ರಾಜೀನಾಮೆ

Update: 2017-09-21 18:21 IST

ಮಂಗಳೂರು, ಸೆ.21: ಕಳೆದ 15 ವರ್ಷದಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ, ವಿವಿಧ ಜವಾಬ್ದಾರಿ ವಹಿಸಿದ್ದ ಕುದ್ರೋಳಿಯ ಅನ್ವರ್ ರೀಕೋ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಅಲ್ಪಸಂಖ್ಯಾತರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿರುವಾಗಲೇ ಅಲ್ಪಸಂಖ್ಯಾತರ ಮೇಲೆ ಕೋಮುಪ್ರಚೋದಿತ ಅಪಪ್ರಚಾರ, ತೇಜೋವಧೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯಲ್ಲಿ ಮುಂದುವರಿಯಲು ಅಸಾಧ್ಯವಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುವ ಕೆಲವು ವಿದ್ಯಮಾನದಿಂದ ಮನನೊಂದು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News