ಮಂಚಿ: ವಿಶ್ವ ಪೌಷ್ಟಿಕ ಆಹಾರ ಸಪ್ತಾಹ

Update: 2017-09-21 13:14 GMT

ಬಂಟ್ವಾಳ, ಸೆ. 21: ಆಧುನಿಕ ಆಡಂಬರದ ಜೀವನದಲ್ಲಿ ನಮ್ಮ ಪಾರಂಪರಿಕ ಆಹಾರ ಪದ್ಧತಿಯು ಬದಲಾವಣೆಯಾಗುತ್ತಿವೆ. ಇದರಿಂದ ಮನುಷ್ಯನಿಗೆ ಹೊಸ, ಹೊಸ ರೋಗಗಳು ಬರುತ್ತಿವೆ ಎಂದು ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಧೀಶ ಪ್ರಕಾಶ್ ಸಿಡಿ ಹೇಳಿದ್ದಾರೆ.  

ಮಂಚಿ ಗ್ರಾಪಂ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ, ಗ್ರಾಪಂ ಮಂಚಿ ಮತ್ತು ಸ್ತ್ರೀ ಶಕ್ತಿ ಗೊಂಚಲು ಮಂಚಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಹಾಗೂ ಮಾತೃ ಪೂರ್ಣ ಯೋಜನೆಯ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಚಿ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ವಹಿಸಿದ್ದರು.

ವೇದಿಕೆಯಲ್ಲಿ ಹೆಚ್ಚುವರಿ ಸರಕಾರಿ ಅಭಿಯೋಜಕ ಎಂ.ಎಸ್.ಅಲಿ, ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಜಿಪಂ ಸದಸ್ಯ ಎಂ.ಎಸ್ ಮುಹಮ್ಮದ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಗ್ರಾಪಂ ಉಪಾಧ್ಯಕ್ಷ ಮೋಹನ್‍ದಾಸ, ವಕೀಲರಾದ ಆಶಾ ಮಣಿ ಗ್ರಾಪಂ ಸದಸ್ಯರಾದ ಜಿ.ಎಂ.ಇಬ್ರಾಹಿಂ, ಬದ್ರುದ್ದೀನ್, ಕೃಷ್ಣಪ್ಪ ಬಂಗೇರ, ಪುಷ್ಪ ಕಾಮತ್, ರೋಜಿ ಡಿಮೆಲ್ಲೋ, ಮೋಹನ್ ಪ್ರಭು, ಸುಮ, ಕೆಎಸ್ ಪ್ರತಿಮಾ ಮತ್ತು ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಭವ್ಯಾ ಉಪಸ್ಥಿತರಿದ್ದರು.

ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾಜೋಶಿ ಸ್ವಾಗತಿಸಿ, ಮೇಲ್ವಿಚಾರಕಿ ಗುಣವತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News