ಸೆ.24ರಂದು ಸಂತ ಪಾದ್ರೆ ಪಿಯೊ ಅವರ ವಾರ್ಷಿಕ ಮಹೋತ್ಸವ

Update: 2017-09-21 13:28 GMT

ಮಂಗಳೂರು, ಸೆ. 21: ನಗರದ ಜೈಲ್ ರಸ್ತೆಯ ಪಿಯೋ ಮಾಲ್ ಸಮೀಪದ ಕಪುಚಿನ್ ಫಾದರ್ಸ್ ಫಿಯೆರಿಯಲ್ಲಿ ಸಂತ ಪಾದ್ರೆ ಪಿಯೊ ಅವರ ವಾರ್ಷಿಕ ಮಹೋತ್ಸವ ಸೆ.24ರಂದು ನಡೆಯಲಿದೆ ಎಂದು ಪಾದ್ರೆ ಪಿಯೊ ಕ್ಷೇತ್ರದ ಮುಖ್ಯಸ್ಥ ಫಾ.ಮೆಲ್ವಿನ್ ಡಿಸೋಜ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದು ಸಂಜೆ 6 ಗಂಟೆಗೆ ಶಿವಮೊಗ್ಗ ಬಿಷಪ್ ಫ್ರಾನ್ಸಿಸ್ ಸೆರಾವೊ ಪ್ರಧಾನ ಗುರುಗಳಾಗಿ ಪೂಜೆ ನೆರವೇರಿಸಲಿದ್ದಾರೆ. ಸಂಜೆ 5 ಗಂಟೆಗೆ ಪಾದ್ರೆ ಪಿಯೋ ಅವರನ್ನು ಗೌರವಿಸಿ, ಸಂಸ್ಥೆಯ ಸುತ್ತ ಮೆರವಣಿಗೆ ನಡೆಯಲಿದೆ. ಇದಕ್ಕೂ ಮುನ್ನ ಅಂದು ಬೆಳಗ್ಗೆ 9 ಗಂಟೆಗೆ ಮೆಲಯಾಳ ಮತ್ತು 11ಗಂಟೆಗೆ ನ್ನಡ ಭಾಷೆಯಲ್ಲಿ ಪ್ರಾರ್ಥನೆ ನಡೆಯಲಿದೆ. ಸೆ.23ರಂದು ಬೆಳಗ್ಗೆ 11ಗಂಟೆಗೆ ವ್ಯಾದಿಷ್ಟರಿಗಾಗಿ ಪ್ರತ್ಯೇಕ ಪೂಜೆ, ಪ್ರಾರ್ಥನೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸಂತ ಪಾದ್ರೆ: ಇಟೆಲಿ ದೇಶದ ಮಹಾನ್ ಸಂತ ಪಾದ್ರೆ ಪಿಯೊ, 1887ರ ಮೇ 25ರಂದು ಹುಟ್ಟಿದರು. 1910ರಲ್ಲಿ ಗುರುದೀಕ್ಷೆ ಪಡೆದು, ಪ್ರಾರ್ಥನೆ, ಸರಳತೆ, ಭಕಿತಿಘಿ, ವಿಶ್ವಾಸ, ತ್ಯಾಗದ ಮೂಲಕ ಸಂತರ ಪದವಿ ಪಡೆದವರು. ಅವರ ಅಪಾರ ದೈವಭಕ್ತಿಯ ಪರಿಣಾಮವಾಗಿ ಏಸುಕ್ರಿಸ್ತರ ಪಂಚಗಾಯಗಳು ಅವರ ಶರೀರದಲ್ಲಿ ಗೋಚರಿಸಿದವು. ಇಂದು ಪಾದ್ರೆ ಪಿಯೊ ‘ಜೀವಂತ ಶಿಲುಬೆ’ ಎಂಬ ಹೆಸರಿನಿಂದ ಸದ್ಭಕ್ತಿ ಮೆರೆದಿದ್ದಾರೆ ಎಂದು ಫಾ.ಮೆಲ್ವಿನ್ ಡಿಸೋಜ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ ಸಂಚಾಲಕ ಫಾದರ್ ಡೆರಿಕ್ ಡಿಸೋಜ, ಕೆನರಾ ಕಮ್ಯುನಿಕೇಶನ್ ಸೆಂಟರ್ ನಿರ್ದೇಶಕ ಫಾದರ್ ರಿಚರ್ಡ್ ಡಿಸೋಜ, ಸಂದೇಶ ಪ್ರತಿಷ್ಠಾನದ ಉಪನಿರ್ದೇಶಕ ಬ್ರದರ್ ವಿಕ್ಟರ್ ಕ್ರಾಸ್ತಾ, ಸಂಗೀತಗಾರ ಜೋಯೆಲ್ ಪಿರೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News