ಎಲ್‌ಟಿಸಿಯಲ್ಲಿ ಪ್ರಯಾಣಿಸುವ ಸರಕಾರಿ ನೌಕರರಿಗಿಲ್ಲ ದಿನಭತ್ಯೆ

Update: 2017-09-21 14:03 GMT

ಹೊಸದಿಲ್ಲಿ,ಸೆ.21: ಲೀವ್ ಟ್ರಾವೆಲ್ ಕನ್ಸೆಷನ್(ಎಲ್‌ಟಿಸಿ) ಸೌಲಭ್ಯದಡಿ ಪ್ರವಾಸ ಕೈಗೊಳ್ಳುವ ಕೇಂದ್ರ ಸರಕಾರಿ ನೌಕರರಿಗೆ ದಿನಭತ್ಯೆಯನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಲಾಗಿದ್ದು, ನೂತನ ನಿಯಮಗಳು 2017,ಜುಲೈ 1ರಿಂದ ಪೂರ್ವಾನ್ವಯ ಗೊಳ್ಳಲಿವೆ.

ನಿಯಮಾವಳಿಗಳಡಿ ಅರ್ಹ ನೌಕರರು ತಮ್ಮ ತವರೂರು ಮತ್ತು ಇತರ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ರಜೆ ಮಂಜೂರು ಮಾಡಲು ಮತ್ತು ಅವರ ಪ್ರಯಾಣ ವೆಚ್ಚವನ್ನು ಭರಿಸಲು ಎಲ್‌ಟಿಸಿ ಅವಕಾಶ ಕಲ್ಪಿಸುತ್ತದೆ.

ಎಲ್‌ಟಿಸಿ ಸೌಲಭ್ಯ ಬಳಸಿಕೊಳ್ಳುವ ನೌಕರರಿಗೆ ಈ ಮೊದಲು ಅವರ ಹುದ್ದೆಗಳನ್ನು ಅನುಸರಿಸಿ ವಿವಿಧ ದರಗಳಲ್ಲಿ ದಿನಭತ್ಯೆಗಳನ್ನು ಪಾವತಿಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News