ಗುಲಾಬಿ ಬಣ್ಣಕ್ಕೆ ತಿರುಗಿದ ಉಪ್ಪು ನೀರಿನ ಸರೋವರ: ಕಾರಣವೇನು ಗೊತ್ತೇ?
Update: 2017-09-21 21:00 IST
ಹೊಸದಿಲ್ಲಿ, ಸೆ.21: ಹಸಿರು ಹಾಗೂ ಗುಲಾಬಿ ಬಣ್ಣಕ್ಕೆ ತಿರುಗಿದ ‘ಚೀನಾದ ಮೃತ ಸಮುದ್ರ’ವೆಂದೇ ಹೆಸರುವಾಸಿಯಾಗಿರುವ ಉಪ್ಪು ನೀರಿನ ಸರೋವರವೊಂದು ಇದೀಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಉತ್ತರ ಚೀನಾದ ಶಾಂಕ್ಸಿ ಪ್ರಾಂತದಲ್ಲಿರುವ ಯಂಚೆಂಗ್ ಉಪ್ಪು ನೀರಿನ ಸರೋವರದ ಒಂದು ಭಾಗ ಹಸಿರು ಹಾಗೂ ಇನ್ನೊಂದು ಭಾಗ ಗುಲಾಬಿ ಬಣ್ಣಕ್ಕೆ ತಿರುಗಿದೆ.
ಗುಲಾಬಿ ಬಣ್ಣಕ್ಕೆ ತಿರುಗಿದ ನೀರಿನಲ್ಲಿ ಡನಾಲಿಲ್ಲಾ ಸಲೀನಾ ಎಂಬ ರಾಸಾಯನಿಕ ಮಿಶ್ರಣವಾಗಿದ್ದು, ಇದರಿಂದ ನೈಜ ಹಸಿರು ಬಣ್ಣ ಮರೆಯಾಗಿ ಗುಲಾಬಿ ಬಣ್ಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸರೋವರ ಎರಡೆರಡು ಬಣ್ಣ ತಾಳುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಹಲವು ಬಾರಿ ಸರೋವರದ ನೀರಿನ ಬಣ್ಣ ಬದಲಾಗಿದೆ. ಮೃತ ಸಮುದ್ರದಲ್ಲಿರುವಷ್ಟೇ ಉಪ್ಪಿನ ಪ್ರಮಾಣ ಈ ಸರೋವರದಲ್ಲಿದ್ದು, ಇದರ ಮೇಲೆ ತೇಲಾಡಿಕೊಂಡು ಮಲಗಬಹುದುದಾಗಿದೆ.