25ರಂದು ಸಾಮರ್ಥ್ಯ ಅಭಿವೃದ್ಧಿ ಕುರಿತು ಕಾರ್ಯಾಗಾರ

Update: 2017-09-21 15:35 GMT

ಉಡುಪಿ, ಸೆ. 21: ಮಣಿಪಾಲ ವಿವಿಯ ದಿ ಸೆಂಟರ್ ಫಾರ್ ಅಡ್ವಾನ್ಸ್‌ಡ್ ರಿಸರ್ಚ್ ಇನ್ ಫೈನಾನ್ಶಿಯಲ್ ಇನ್‌ಸ್ಟಿಟ್ಯೂಶನ್, ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಮತ್ತು ಉಡುಪಿ ಸಿಂಡಿಕೇಟ್ ಬ್ಯಾಂಕ್‌ಗಳ ಸಹಯೋಗದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕ್ಷೇತ್ರ ಮೇಲ್ವಿಚಾರಕರ ಸಾಮರ್ಥ್ಯ ಅಭಿವೃದ್ಧಿ ಕುರಿತು ಕಾರ್ಯಾಗಾರವನ್ನು ಮಣಿಪಾಲ ವಿವಿಯ ಎಂಸಿಪಿಡಿ ಹಾಲ್‌ನಲ್ಲಿ ಸೆ. 25 ರಂದು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಬೆಳಗ್ಗೆ 9:30ಕ್ಕೆ ಬೆಂಗಳೂರು ಅಜೀಂ ಪ್ರೇಮ್ ಜಿ ವಿವಿಯ ಕನ್ಸಲ್ಟೆಂಟ್ ಡಾ.ಕೃಷ್ಣ ಕೊತಾಯ್ ಉದ್ಘಾಟಿಸಲಿದ್ದಾರೆ. ಮಣಿಪಾಲ ವಿವಿಯ ನಿರ್ದೇಶಕ ಬದ್ರಿ ನಾರಾಯಣನ್ ಭಾಗವಹಿಸಲಿರುವರು. ಇದರಲ್ಲಿ ಅವಿಭಜಿತ ದ.ಕ. ಜಿಲ್ಲೆಗಳ ವಿವಿಧ ಕಿರು ಬಂಡವಾಳ ಸಂಸ್ಥೆಗಳ ಪ್ರತಿನಿಧಿ ಗಳು ಭಾಗವಹಿಸಲಿರುವರು ಎಂದು ಮಣಿಪಾಲ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್‌ನ ಕೋಆರ್ಡಿನೇಟರ್ ಡಾ.ಸವಿಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಆರ್ಥಿಕ ಉತ್ಪನ್ನಗಳಿಗಾಗಿ ಜಾಗೃತಿ ಸೃಷ್ಟಿಸಲು ಕಿರು ಬಂಡವಾಳ ಸಂಸ್ಥೆಗಳನ್ನು ಬಲಪಡಿಸುವುದು, ಹೊಸ ಜ್ಞಾನ ಮತ್ತು ಒಳನೋಟ ಬೆಳೆಸುವ ಗುರಿ ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಡಾ.ಕೆ.ವಿ.ಎಂ.ವಾರಂಬಳ್ಳಿ, ಪ್ರೊ.ರೇಖಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News