ವಿಕಲಚೇತನರಿಗೆ ಕೃತಕ ಆವಯವ ತಪಾಸಣಾ ಶಿಬಿರ

Update: 2017-09-21 16:41 GMT

ಉಡುಪಿ, ಸೆ.21: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀ ಕರಣ ಇಲಾಖೆ ಉಡುಪಿ, ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ವಿಕಲಚೇತನರಿಗೆ ಅಗತ್ಯವಿರುವ ಕೃತಕ ಅವಯವಗಳ ಗುರುತಿಸುವಿಕೆ (ಕೃತಕ ಕಾಲು, ಕೃತಕ ಕೈ, ಸರ್ಜಿಕಲ್‌ಶೂ/ಸ್ಯಾಂಡಲ್,ಕ್ಯಾಲಿಪರ್, ಸರ್ಜಿಕಲ್ ಬೆಲ್ಟ್ ಇತ್ಯಾದಿ) ತಪಾಸಣಾ ಶಿಬಿರಗಳನ್ನು ಸೆ.25ರಂದು ತಾಲೂಕು ಆಸ್ಪತ್ರೆ ಕಾರ್ಕಳ, ಸೆ.26ರಂದು ಅಂಬೇಡ್ಕರ್ ಭವನ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಬಳಿ ಭಂಡಾರ್‌ಕಾರ್ಸ್‌ ಕಾಲೇಜು ರಸ್ತೆ ಕುಂದಾಪುರ ಹಾಗೂ ಸೆ.27ರಂದು ಸರಕಾರಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ ಇಲ್ಲಿ ಬೆಳಗ್ಗೆ 10:00ರಿಂದ 1:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ವಿಕಲಚೇತನರು ಶಿಬಿರಕ್ಕೆ ಬರುವಾಗ ವಿಕಲಚೇತನರ ಗುರುತುಚೀಟಿ (ಜೆರಾಕ್ಸ್ ಪ್ರತಿ ಹಾಗೂ ಮೂಲ ಪ್ರತಿ), ವೈದ್ಯಕೀಯ ಪ್ರಮಾಣ ಪತ್ರ, ಭಾವಚಿತ್ರ-2, ಬಿಪಿಎಲ್ ರೇಶನ್ ಕಾರ್ಡ್‌ನ ಜೆರಾಕ್ಸ್ ಅಥವಾ ಆದಾಯ ಪ್ರಮಾಣ ಪತ್ರದ ಪ್ರತಿ (ಬಿಪಿಎಲ್ ಕಾರ್ಡ್ ಇಲ್ಲದವರು) ಮತ್ತು ಆಧಾರ್ ಕಾರ್ಡ್‌ನ ಜೆರಾಕ್ಸ್‌ಗಳನ್ನು ಕಡ್ಡಾಯವಾಗಿ ತರಬೇಕು.

ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವ ವಿಕಲಚೇತನರು ಕಳೆದ 3 ವರ್ಷಗಳಲ್ಲಿ ಸರಕಾರದ ವಿವಿಧ ಯೋಜನೆ/ಇಲಾಖೆಗಳಿಂದ ಯಾವುದೇ ಕೃತಕ ಅವಯವ ಗಳನ್ನು ಪಡೆದಿರಬಾರದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0820- 2574810,9164276061ನ್ನು ಸಂಪಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News