ಮರಳು ಸಾಗಾಟ ವಾಹನಗಳಿಗೆ ಹಳೆಯ ಜಿಪಿಎಸ್ ವ್ಯವಸ್ಥೆ ಮುಂದುವರೆಸಲು ಆಗ್ರಹ

Update: 2017-09-21 16:48 GMT

ಉಡುಪಿ, ಸೆ.21: ಉಡುಪಿ ಜಿಲ್ಲೆಯ ಮರಳು ಸಾಗಾಟ ವಾಹನಗಳಿಗೆ ಈ ಹಿಂದೆ ಅಳವಡಿಸಲಾದ ಜಿಪಿಎಸ್ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿರುವ ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿ, ಈ ಕುರಿತು ನಾಳೆ ಕರೆಯಲಾದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನ್ಯಾಯ ಸಿಗದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಇಂದು ಉಡುಪಿಯ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ಮೂರು ವರ್ಷಗಳ ಹಿಂದೆ ಮರಳು ಸಾಗಾಟ ಹಾಗೂ ಕಟ್ಟಡ ಸಾಮಾಗ್ರಿ ಸಾಗಾಟದ ಲಾರಿ ಟೆಂಪೊಗಳಿಗೆ ಜಿಪಿಎಸ್ ಅಳವಡಿಸ ಲಾಗಿದ್ದು, ಇದಕ್ಕಾಗಿ ಸುಮಾರು 12ಸಾವಿರ ರೂ. ವ್ಯಯ ಮಾಡಲಾಗಿತ್ತು. ಬಳಿಕ ಮರಳುಗಾರಿಕೆಗೆ ಕೋರ್ಟ್ ತಡೆಯಾಜ್ಞೆ ವಿಧಿಸಿತ್ತು. ಇದೀಗ ಮತ್ತೆ ಮರಳುಗಾರಿಕೆ ಆರಂಭವಾಗಿದ್ದು, ಜಿಲ್ಲಾಡಳಿತ ಟೆಂಡರ್ ಷರತ್ತುಗಳ ನಿಯ ಮಾವಳಿ ಪ್ರಕಾರ ಪ್ರತಿ ವಾಹನಕ್ಕೆ 9,700ರೂ. ದರದಂತೆ ಜಿಪಿಎಸ್ ಅಳವಡಿ ಸಲು ಆದೇಶ ನೀಡಿದೆ ಎಂದರು.

ಆದರೆ ನಾವು ಈ ಹಿಂದೆ ಆಳವಡಿಸಿದ ಜಿಪಿಎಸ್ ಉಪಕರಣದ ಬಗ್ಗೆ ತಾಂತ್ರಿಕ ಪರಿಶೋಧಕರಿಂದ ಪರೀಕ್ಷಿಸಿದ್ದು, ಈ ಉಪಕರಣ ಸರಿಯಾಗಿ ಕೆಲಸ ನಿರ್ವಹಿಸುತ್ತಿರುವುದು ತಿಳಿದುಬಂದಿದೆ. ಆದುದರಿಂದ ಜಿಲ್ಲಾಡಳಿತ ಈಗಾ ಗಲೇ ಜಿಪಿಎಸ್ ಅಳವಡಿಸಿದ ಜಿಲ್ಲೆಯ ಸುಮಾರು 2000 ಮರಳು ಸಾಗಾಟ ಹಾಗೂ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಟೆಂಪೊಗಳಿಗೆ ಅದನ್ನೇ ಮುಂದು ವರೆಸಿಕೊಂಡು ಹೋಗಲು ಅನುವು ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ನಾವು ಹೊಸದಾಗಿ ಜಿಪಿಎಸ್ ಅಳವಡಿಕೆ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

ಈ ಕುರಿತು ಇಂದು ಕರೆದ ಜಿಲ್ಲಾಧಿಕಾರಿಗಳ ಸಭೆಯನ್ನು ಏಕಾಏಕಿ ರದ್ದು ಪಡಿಸಲಾಗಿದ್ದು, ಮತ್ತೆ ನಾಳೆ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಮರುದಿನ ಎಲ್ಲ ಲಾರಿ ಟೆಂಪೊಗಳನ್ನು ರಸ್ತೆಗೆ ಇಳಿಸದೆ ಮುಷ್ಕರ ನಡೆಸಲಾಗುವುದು. ಇದರಿಂದ ಎಲ್ಲ ರೀತಿಯ ತೊಂದರೆಗೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದು ಅವರು ದೂರಿದರು.

ಸಭೆಯಲ್ಲಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್ ಸುವರ್ಣ, ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ನಾರಾಯಣ ಗೌಡ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೇಶ್ ಶೇಟ್, ಕಾರ್ಕಳ ಲಾರಿ ಮಾಲಕರ ಸಂಘದ ಅಧ್ಯಕ್ಷ ಉದಯ ಕುಮಾರ್, ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಟೆಂಪೊ ಮಾಲಕರ ಸಂಘದ ಅಧ್ಯಕ್ಷ ಜಯಾನಂದ ಪೂಜಾರಿ, ರಾಘ ವೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News