ರೊಹಿಂಗ್ಯಾರಿಗೆ ಆಹಾರ ಸಾಗಿಸುತ್ತಿದ್ದ ಟ್ರಕ್ ಕಣಿವೆಗೆ: 9 ಸಾವು

Update: 2017-09-21 17:03 GMT

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 21: ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯಾ ನಿರಾಶ್ರಿತರಿಗಾಗಿ ನೆರವು ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್ ಒಂದು ಬಂದರ್‌ಬನ್ ಜಿಲ್ಲೆಯಲ್ಲಿ ರಸ್ತೆಯಿಂದ ಜಾರಿ ಕಂದಕಕ್ಕೆ ಬಿದ್ದಿದ್ದು ಕನಿಷ್ಠ 9 ನೆರವು ಕಾರ್ಯಕರ್ತರು ಮೃತಪಟ್ಟಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ.

ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯು ಈ ನೆರವು ಸಾಮಗ್ರಿಗಳನ್ನು ಕಳುಹಿಸುತ್ತಿತ್ತು.

500 ರೊಹಿಂಗ್ಯಾ ಕುಟುಂಬಗಳಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವುದಕ್ಕಾಗಿ ನೇಮಿಸಿಕೊಳ್ಳಲಾದ ಬಾಂಗ್ಲಾದೇಶೀಯರು ಮೃತಪಟ್ಟವರಾಗಿದ್ದಾರೆ ಎಂದು ರೆಡ್‌ಕ್ರಾಸ್ ವಕ್ತಾರೆ ಮಿಸಾಡಾ ಸೈಫ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News