ತಮಿಳುನಾಡು ಮುಖ್ಯಮಂತ್ರಿಯಾಗಲು ನಾನು ಸಿದ್ಧ: ಕಮಲ್ ಹಾಸನ್

Update: 2017-09-22 13:01 GMT

ಚೆನ್ನೈ, ಸೆ. 22: ತನ್ನ ರಾಜಕೀಯ ಮಹತ್ವಾಕಾಂಕ್ಷೆ ಸ್ಪಷ್ಟಪಡಿಸಿರುವ ಕಮಲ್ ಹಾಸನ್, ತಾನು ತಮಿಳುನಾಡು ಮುಖ್ಯಂತ್ರಿಯಾಗಿ ಸೇವೆ ಸಲ್ಲಿಸಲು ಸಿದ್ಧ ಎಂಬ ಸೂಚನೆ ನೀಡಿದ್ದಾರೆ.

ಗುರುವಾರ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಮಲ್ ಹಾಸನ್ ತನ್ನ ಮಹತ್ವಾಕಾಂಕ್ಷೆಯನ್ನು ಬಹಿರಂಗಪಡಿಸಿದ್ದಾರೆ. ತಾನು ರಾಜಕೀಯ ಸೇರಲು ಹಾಗೂ ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಅವರು ಹೇಳಿದ್ದಾರೆ.

ಕೆಲವರು ನೇತಾರನ ಟೋಪಿ ಧರಿಸುತ್ತಾರೆ. ಅದು ಮುಳ್ಳಿನ ಕಿರೀಟ. ಕೆಲವರು ಕುಸಿಯವ ನೆಲೆವನ್ನು ಜನ ವಾಸ ಯೋಗ್ಯವನ್ನಾಗಿ ಮಾಡುತ್ತಾರೆ. ನನಗೆ ಅಧಿಕಾರದ ಹಸಿವು ಇಲ್ಲ. ಆದರೆ, ಜನರಿಗೆ ನ್ಯಾಯ ಒದಗಿಸಲು ರಾಜಕೀಯಾಧಿಕಾರ ವಶಪಡಿಸಿಕೊಳ್ಳುವುದು ಒಂದೇ ದಾರಿ ಎಂದು ಅವರು ಹೇಳಿದ್ದಾರೆ.

 ರಾಜಕಾರಣಿಗಳು ರಾಜ್ಯವನ್ನು ಕರುಣಾಜನಕ ಸ್ಥಿತಿಗೆ ತರುತ್ತಿದ್ದಾರೆ. ಇದು ಅವರಿಗೆ ಅರ್ಥವಾಗುತ್ತಿಲ್ಲ. ನಾನು ಜನರನ್ನು ಹಂತಹಂತವಾಗಿ ಭೇಟಿಯಾಗಲಿದ್ದೇನೆ ಹಾಗೂ ಸ್ಪಷ್ಟ ಮಾರ್ಗ ನಕ್ಷೆ ನೀಡಲಿದ್ದೇನೆ ಎಂದು ಅವರು ಹೇಳಿದರು.

ನಿನ್ನೆ ಅಲ್ವಾರ್‌ಪೇಟ್‌ನ ತನ್ನ ನಿವಾಸಕ್ಕೆ ಆಗಮಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರೊಂದಿಗೆ ಮಾತುಕತೆ ನಡೆಸಿದ್ದ ಕಮಲ್ ಹಾಸನ್, ನಾನು ಅವರಿಂದ ರಾಜಕೀಯದ ವಕ್ರತೆ ಕಲಿತಿದ್ದೇನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News